ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಜಿಬಿಎ ಹಾಗೂ ಐದು ನಗರ ಪಾಲಿಕೆಗಳ ವ್ಯಾಪ್ತಿಯ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ವಾಟ್ಸಾಪ್ ಮೂಲಕವೇ ಉಚಿತವಾಗಿ ಇ–ಖಾತಾ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
‘ಭೂ–ಗ್ಯಾರಂಟಿ’ ಅಭಿಯಾನದಡಿ ನೇರ ಸೇವೆಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಮಾರ್ಗದರ್ಶನದಲ್ಲಿ, ರಾಜ್ಯ ಸರ್ಕಾರದ ಆರನೇ ಗ್ಯಾರಂಟಿಯಾದ ‘ಭೂ-ಗ್ಯಾರಂಟಿ: ನನ್ನ ಖಾತಾ, ನನ್ನ ಹಕ್ಕು’ ಅಭಿಯಾನದಡಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯಿಂದ ಆಸ್ತಿ ಮಾಲೀಕರು ಇ-ಖಾತಾ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಅಥವಾ ಮಧ್ಯವರ್ತಿಗಳನ್ನು ಅವಲಂಬಿಸುವ ಅಗತ್ಯವಿಲ್ಲ. ವಾಟ್ಸಾಪ್ಗೆ ಬರುವ ವಿಶಿಷ್ಟ ePID ಸಂಖ್ಯೆಯುಳ್ಳ ಪಿಡಿಎಫ್ (PDF) ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿ ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಬಹುದು.
ಇ–ಖಾತಾ ಎಂದರೇನು ಮತ್ತು ಇದರ ಪ್ರಯೋಜನವೇನು?
ಸ್ಥಳೀಯ ನಗರ ಪಾಲಿಕೆ ನಿರ್ವಹಿಸುವ ಆಸ್ತಿ ಮತ್ತು ತೆರಿಗೆ ದಾಖಲೆಯ ಡಿಜಿಟಲ್ ರೂಪವೇ ಇ-ಖಾತಾ. ಇದರಲ್ಲಿ ಮಾಲೀಕರ ಹೆಸರು, ವಿಳಾಸ, ಆಸ್ತಿಯ ವಿಸ್ತೀರ್ಣ, ತೆರಿಗೆ ವಿವರ ಮತ್ತು ವಿಶಿಷ್ಟ ePID ಸಂಖ್ಯೆ ಇರುತ್ತದೆ.
ಇ-ಖಾತಾ ಆಸ್ತಿಯ ನೋಂದಣಿ ಪತ್ರ ಅಥವಾ ಸಂಪೂರ್ಣ ಮಾಲೀಕತ್ವದ ಹಕ್ಕುಪತ್ರವಲ್ಲ; ಬದಲಾಗಿ ಇದು ಸ್ಥಳೀಯ ಸಂಸ್ಥೆಯ ತೆರಿಗೆ ಮತ್ತು ಆಸ್ತಿ ದಾಖಲೆ ಮಾತ್ರ.
ಆಸ್ತಿ ತೆರಿಗೆ ಪಾವತಿಸಲು, ಆಸ್ತಿ ಮಾರಾಟ ಅಥವಾ ವರ್ಗಾವಣೆ ಸಂದರ್ಭದಲ್ಲಿ ದಾಖಲೆ ಪರಿಶೀಲಿಸಲು ಮತ್ತು ಮಾಲೀಕತ್ವ ಬದಲಾವಣೆಯಾದಾಗ ಖಾತಾ ನವೀಕರಿಸಲು ಇದು ಅತ್ಯಗತ್ಯ.
ತಿದ್ದುಪಡಿ ಮತ್ತು ಮ್ಯುಟೇಷನ್ಗೂ ಆನ್ಲೈನ್ ಅವಕಾಶ ವಾಟ್ಸಾಪ್ ಸಂದೇಶದೊಂದಿಗೆ ಜಿಬಿಎಯ ಅಧಿಕೃತ ಇ–ಆಸ್ತಿ ಪೋರ್ಟಲ್ ಲಿಂಕ್ https://GBAeAasthi.karnataka.gov.in](https://GBAeAasthi.karnataka.gov.in ಕೂಡ ನೀಡಲಾಗುತ್ತದೆ. ಆಸ್ತಿ ಮಾಲೀಕರು ತಮ್ಮ ePID ಸಂಖ್ಯೆ ಬಳಸಿ ಆನ್ಲೈನ್ನಲ್ಲಿಯೇ ದಾಖಲೆ ಪರಿಶೀಲಿಸಬಹುದು. ಹೆಸರು, ವಿಳಾಸದಲ್ಲಿ ತಪ್ಪಿದ್ದರೆ ತಿದ್ದುಪಡಿ ಮಾಡಲು ಅಥವಾ ಮಾಲೀಕತ್ವ ಬದಲಾವಣೆಗೆ (ಮ್ಯುಟೇಷನ್) ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬಹುದು.
ಮಧ್ಯವರ್ತಿಗಳಿಗೆ ಹಣ ನೀಡಬೇಡಿ: ಜಿಬಿಎ ಮನವಿಸರ್ಕಾರಿ ಸೇವೆಗಳನ್ನು ನಾಗರಿಕರ ಮನೆಬಾಗಿಲಿಗೆ ತಲುಪಿಸುವುದು, ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಮತ್ತು ಪಾರದರ್ಶಕತೆ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ಇ–ಖಾತಾ ಪಡೆಯಲು ಯಾರಿಗೂ ಹಣ ಪಾವತಿಸುವ ಅಗತ್ಯವಿಲ್ಲ. ಆಸ್ತಿ ಮಾಲೀಕರು ತಮ್ಮ ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿ ಇ-ಖಾತಾ ಪಡೆದುಕೊಳ್ಳುವಂತೆ ಜಿಬಿಎ ಕೋರಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
