ಕನ್ನಡ ಮನರಂಜನಾ ವಾಹಿನಿ ಸ್ಟಾರ್ ಸುವರ್ಣ ಹೊಸ ರಿಯಾಲಿಟಿ ಶೋವನ್ನು ಇದೇ ವೀಕೆಂಡ್ ನಲ್ಲಿ ಆರಂಭ ಮಾಡುತ್ತಿದೆ.ವೀಕೆಂಡ್ ನಲ್ಲಿ ರಿಲ್ಯಾಕ್ಸ್ ಆಗಬೇಕು ಅನ್ನೋ ವೀಕ್ಷಕರಿಗೆ ಈ ಹೊಚ್ಚ ಹೊಸ ರಿಯಾಲಿಟಿ ಶೋ ಮೂಲಕ ಮಸ್ತ್ ಮನರಂಜನೆಯ ರಸದೌತಣ ನೀಡುವುದಕ್ಕೆ ಮುಂದಾಗಿದೆ ‘ಸುವರ್ಣ ಸೆಲೆಬ್ರಿಟಿ ಲೀಗ್’.
‘ಸುವರ್ಣ ಸೆಲೆಬ್ರಿಟಿ ಲೀಗ್’ ಕಿರುತೆರೆಯ ಫೇಮಸ್ ಸೆಲೆಬ್ರಿಟಿಗಳಿಗಾಗಿಯೇ ಆರಂಭಿಸುತ್ತಿರುವ ಹೊಸ ರೀತಿಯ ರಿಯಾಲಿಟಿ ಶೋ. ಈ ಶೋನಲ್ಲಿ ಸುಮಾರು ಎರಡು ತಂಡಗಳು ಇರುತ್ತವೆ. 10 ಮಂದಿ ಸೆಲೆಬ್ರಿಟಿಗಳು ಈ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಸುಮಾರು 8 ವಾರಗಳ ಕಾಲ ಅಂದರೆ, ಎರಡು ತಿಂಗಳ ಕಾಲ ಕಿರುತೆರೆಯಲ್ಲಿ ಈ ಸಮರ ನಡೆಯಲಿದೆ. ಕೊನೆಯಲ್ಲಿ ಯಾವ ತಂಡ ‘ಸುವರ್ಣ ಸೆಲೆಬ್ರಿಟಿ ಲೀಗ್’ ಗೆಲ್ಲುತ್ತೆ? ಅನ್ನೋದು ಈ ಶೋನ ಅಂತಿಮ ಘಟ್ಟ.
‘ಸುವರ್ಣ ಸೆಲೆಬ್ರಿಟಿ ಲೀಗ್’ ಕಾರ್ಯಕ್ರಮದ ಶೈಲಿ ಏನಪ್ಪಾ ಅಂದರೆ, ಸೆಲೆಬ್ರಿಟಿಗಳ ಮೋಜು-ಮಸ್ತಿ, ತರ್ಲೆ ತುಂಟಾಟದ ಜೊತೆ ಪೈಪೋಟಿಯ ಮಹಾ ಯುದ್ಧವೇ ನಡೆಯಲಿದೆ. ಇನ್ನು ಈ ಕಾರ್ಯಕ್ರಮದ ಮತ್ತೊಂದು ವಿಶೇಷ ಅಂದರೆ, ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ನಟಿಸಿ ಕನ್ನಡಿಗರ ಮನಸ್ಸನ್ನು ಗೆದ್ದರುವ ಕಾರ್ತಿಕ್ ಮಹೇಶ್ ನಿರೂಪಣೆ ಮಾಡಲಿದ್ದಾರೆ. ಇತ್ತೀಚೆಗೆ ಬಿಗ್‌ಬಾಸ್ ಸೀಸನ್ 10 ವಿನ್ನರ್ ಆಗಿಯೂ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ.
ಕಾರ್ತಿಕ್ ಮಹೇಶ್ ಇದೇ ಮೊದಲ ಬಾರಿಗೆ ‘ಸುವರ್ಣ ಸೆಲೆಬ್ರಿಟಿ ಲೀಗ್’ನ ನಿರೂಪಣೆ ಮಾಡುತ್ತಿದ್ದಾರೆ. ಜೊತೆ ಬಿಗ್‌ಬಾಸ್‌ನಲ್ಲಿಯೇ ಕಾರ್ತಿಕ್ ಮಹೇಶ್‌ಗೆ ಎದುರಾಳಿಯಾಗಿದ್ದ ಕೆಲವರು ಸ್ಪರ್ಧಿಗಳು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ‘ಸುವರ್ಣ ಸೆಲೆಬ್ರಿಟಿ ಲೀಗ್’ ಶೋ ಶುಭಾರಂಭ ಮಾಡುವುದಕ್ಕೆ ಸಿದ್ಧತೆಗಳು ಭರ್ಜರಿಯಾಗಿ ಆರಂಭ ಆಗಿದೆ. ಈಗಾಗಲೇ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಕಿರುತೆರೆ ವೀಕ್ಷಕರಿಗೆ ಮಸ್ತ್ ಮನರಂಜನೆ ಸಿಗೋದು ಗ್ಯಾರಂಟಿ ಅನಿಸುತ್ತಿದೆ.
ಇನ್ನು ಈ ಶೋನಲ್ಲಿ ಭಾಗವಹಿಸುತ್ತಿರುವ ಸ್ಪರ್ಧಿಗಳು ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದ್ದಾರೆ. 10 ಸ್ಪರ್ಧಿಗಳ ಪೈಕಿ ವಿನಯ್ ಗೌಡ, ನಮ್ರತಾ ಗೌಡ, ತನಿಷಾ ಕುಪ್ಪಂಡ ಹಾಗೂ ರಕ್ಷಕ್ ಈಗಾಗಲೇ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅದೇ ಸ್ಪರ್ಧಿಗಳು ಈ ಶೋನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಸ್ಟಾರ್ ಸುವರ್ಣದ ಈ ಹೊಚ್ಚ ಹೊಸ ಶೋ ‘ಸುವರ್ಣ ಸೆಲೆಬ್ರಿಟಿ ಲೀಗ್’ ಸೆಪ್ಟೆಂಬರ್ 15ರಿಂದ ಆರಂಭ ಆಗುತ್ತಿದೆ. ಪ್ರತಿ ಭಾನುವಾರ 7 ಗಂಟೆಗೆ ಪ್ರಸಾರ ಆಗಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


