ನವವಧು ವರರು ಸಾವಿರಾರು ಕನಸು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ವಿಶೇಷ ಅಂದ್ರೆ ಇಲ್ಲಿ ವರನಿಗೆ ಮಾತ್ರ ಮದುವೆಯ ಸಂಭ್ರಮ. ಹೊಸ ಬಾಳ್ವೆ ನಡೆಸುವ ಕನಸು. ಆದ್ರೆ ವಧುವಿನ ಕನಸು ಬೇರೆಯದೆ ಆಗಿತ್ತು. ಹೌದು, ಈ ವಿಚಿತ್ರ ಪ್ರೇಮ ಘಟನೆ ಬಗ್ಗೆ ನೀವು ತಿಳಿಯಲೇ ಬೇಕು.
ಇಲ್ಲಿ ನವವಧು ಮದುವೆಯಾದ ಹಲವು ದಿನದವರೆಗೂ ತನ್ನ ಗಂಡನೊಂದಿಗೆ ಮೊದಲ ರಾತ್ರಿ ಕಳೆಯಲು ನಿರಾಕರಿಸಿದ್ದಳು. ನವವಧು ದಿನದಿಂದ ದಿನಕ್ಕೆ ವರನಿಂದ ದೂರವಿದ್ದು ಆರೋಗ್ಯ ಸಮಸ್ಯೆ ಕಾರಣ ನೀಡುತ್ತಿದ್ದಳು. ಆದರೆ ವಧುವಿನ ನವರಂಗಿ ಆಟ ಕೆಲವು ದಿನಗಳವರೆಗೆ ವರನಿಗೆ ಗೊತ್ತಾಗಿರಲಿಲ್ಲ. ಕೊನೆಗೂ ಸತ್ಯ ಬಯಲಾದಾಗ ವರನಿಗೆ ತಾನು ಮೋಸ ಹೋದ ಅರಿವಾಗಿದೆ.
ತಾನು ಮದುವೆಯಾದ ವಧು ತನಗೆ ತಿಳಿಯದಂತೆ ಬೇರೊಬ್ಬ ಪುರುಷನ ಸಂಪರ್ಕದಲ್ಲಿದ್ದಳು. ತಂನ್ನೊಂದಿಗೆ ಸುಳ್ಳಿನ ಕಂತೆ ಕಟ್ಟುತ್ತಾ ಅತ್ತ ತನ್ನ ಪ್ರಿಯಕರನ ಬಳಿ ನಿನಗಷ್ಟೇ ದೇಹ ನೀಡುವುದಾಗಿ ಮಾತು ಕೊಟ್ಟಿದ್ದಳು. ಅಷ್ಟು ಮಾತ್ರವಲ್ಲದೆ ಮದುವೆಯಾದ ಹತ್ತನೇ ದಿನ ಆಕೆ ಪ್ರೇಮಿಯೊಂದಿಗೆ ಪರಾರಿಯಾಗಿದ್ದಳು.
ಇನ್ನೇನು ಈ ಸತ್ಯ ಅರಿವಾಗುತ್ತಲೇ, ಪತ್ನಿ ಮಾಡಿದ ಮೋಸದಿಂದ ಕೋಪ ಮತ್ತು ಬೇಸರಗೊಂಡ ಪತಿ ಕಾನೂನು ಮಾರ್ಗದ ಮೂಲಕ ನ್ಯಾಯ ಕೇಳಲು ಹೊರಟಿದ್ದಾನೆ. ಮೋಸ ಮಾಡಿದ ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಕ್ಕಾಗಿ ನೊಂದ ಪತಿಯು ಫತೇಹಾಬಾದ್ ಪೊಲೀಸ್ ಠಾಣೆ ಮುಂದೆ ಹೋರಾಟ ನಡೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296