ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬಸ್ ಹರಿದು ಯುವಕನೊರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬೈಕ್ ಗೆ ಬಸ್ ತಗುಲಿ ಕೆಳಗೆ ಬಿದ್ದ ಯುವಕನ ಕಾಲಿನ ಮೇಲೆ ಬಸ್ ಹರಿದಿದ್ದು, ಜನರು ಸೇರುತ್ತಿದ್ದಂತೆ ಘಟನಾ ಸ್ಥಳದಿಂದ ಚಾಲಕ ನಿರ್ವಾಹಕರಿಬ್ಬರು ಪರಾರಿ ಆಗಿದ್ದಾರೆ.
ಕನಕದಾಸ ಸರ್ಕಲ್ ಬಳಿ ಅಪಘಾತ ನಡೆದಿದ್ದು, ಅಪಘಾತಕ್ಕೊಳಗಾದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


