ತಿಪಟೂರು: ಗೌರಿ, ಯುಗಾದಿ, ರಂಜಾನ್, ಹಬ್ಬಗಳನ್ನು ಮನೆಗಳಲ್ಲಿ ಸಂಭ್ರಮಿಸಿದಂತೆ ಆಚರಿಸುವ ರೀತಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಜನಗಳನ್ನು ಸೇರಿಸಿ ಆಚರಿಸಬೇಕೆಂದು ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಟೂಡ ಶಶಿಧರ್ ಹೇಳಿದರು.
ದೇಶ ಎಂದರೆ ಭೂಪಟ ಅಥವಾ ಗಡಿರೇಖೆ ಅಲ್ಲ, ದೇಶ ಎಂದರೆ ಜನರು. ಕಾಯಕದ ಮೂಲಕ ದೇಶವನ್ನು ಆರ್ಥಿಕವಾಗಿ ಮುನ್ನಡೆಸುತ್ತಿರುವ ಈ ಶ್ರಮಿಕರು ದೇಶದ ಸ್ವಾತಂತ್ರ್ಯೋತ್ಸವಕ್ಕೆ ಕಾರಣೀಭೂತರು ಎಂದು ತಿಳಿಸಿದರು.
ನಗರದ ಕೋಡಿ ಸರ್ಕಲ್ ಇಂದ ಗಾಂಧಿನಗರದ ಟಿಪ್ಪು ಸರ್ಕಲ್ ವರೆಗೆ ಕಾಲ್ನಡಿ ನಡೆಸಿದ್ದೇವೆ. ಜನಸ್ಪಂದನ ಟ್ರಸ್ಟ್ ನ ನಮ್ಮ ನಡಿಗೆ ಬಹಳ ಅರ್ಥಪೂರ್ಣವಾಗಿದೆ, ನಾವು ದೇಶಪ್ರೇಮಿಗಳು ಎಂದರು.
ಇದೇ ಸಂದರ್ಭದಲ್ಲಿ 12 ಜನ ಶ್ರಮಿಕರನ್ನು ಮತ್ತು ಸ್ವಾತಂತ್ರ್ಯ ಸೇನಾನಿಗಳನ್ನು ಬೆಳ್ಳಿ ಪದಕಗಳೊಂದಿಗೆ ಪ್ರಶಂಸನಾಪತ್ರ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾಡ ಶೆಟ್ಟಿಹಳ್ಳಿ ಸತೀಶ ಅತಿಥಿಯಾಗಿ ಭಾಗವಹಿಸಿದ್ದರು. ಸಂವಿಧಾನ ಸಂರಕ್ಷಣೆ ಪಡೆಯ ಅಧ್ಯಕ್ಷ ಲೋಕೇಶ್, ಅಲ್ಲಾಭಕಾಸ್, ದೇವರಾಜ್ ,ಅನೇಕ ಅಭಿಮಾನಿಗಳು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC