ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದಾಗಿನಿಂದ ಸಾವಿರಾರು ಮಂದಿ ಭಕ್ತರು ಪ್ರತಿನಿತ್ಯ ಭೇಟಿ ಕೊಡುತ್ತಿದ್ದಾರೆ. ಇದೀಗ ಪಾಕಿಸ್ತಾನದಿಂದಲೂ ನೆನ್ನೆ ಬಾಲರಾಮನ ದರ್ಶನ ಪಡೆಯಲು ಹಲವರು ಆಗಮಿಸುತ್ತಿದರು. ಪಾಕಿಸ್ತಾನದ ಸಿಂಧಿ ಸಮುದಾಯದ 200 ಸದಸ್ಯರ ನಿಯೋಗ ಅಯೋಧ್ಯೆಗೆ ತಲುಪಿ ಬಾಲರಾಮನಿಗೆ ಪೂಜೆ ಸಲ್ಲಿಸಲಿದೆ ಎಂದು ದೇವಸ್ಥಾನದ ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಈ ನಿಯೋಗವು ಭಾರತಕ್ಕೆ ಒಂದು ತಿಂಗಳ ಧಾರ್ಮಿಕ ಪ್ರವಾಸದಲ್ಲಿದೆ. ಇದೀಗ ರಸ್ತೆ ಮಾರ್ಗವಾಗಿ ನೆನ್ನೆ ಪ್ರಯಾಗ್ ರಾಜ್ ನಿಂದ ಅಯೋಧ್ಯೆಗೆ ತಲುಪಲಿದೆ. ಈ ವೇಳೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ರಾಮ್ ಕಿ ಪೈಡಿಯಲ್ಲಿ ಅವರನ್ನು ಸ್ವಾಗತಿಸಿದರು.
ಭಾರತದಿಂದ ಸಿಂಧಿ ಸಮುದಾಯದ 150 ಸದಸ್ಯರ ನಿಯೋಗವೂ ಅವರೊಂದಿಗೆ ಪ್ರಯಾಣಿಸುತ್ತಿದೆ ಎನ್ನಲಾಗಿದೆ. ಪಾಕಿಸ್ತಾನಿ ನಿಯೋಗಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಯಿತು. ಅವರಿಗಾಗಿ ಅಯೋಧ್ಯೆಯ ಉದಾಸಿನ್ ಋಷಿ ಆಶ್ರಮ ಮತ್ತು ಶಬರಿ ರಸೋಯಿಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ನಿಯೋಗವು ನೆನ್ನೆ ಸಂಜೆ ರಾಮ್ ಕಿ ಪೈಡಿಯಲ್ಲಿ ಸರಯು ಆರತಿಯಲ್ಲಿ ಪಾಲ್ಗೊಂಡರು, ಅಲ್ಲಿ ರಾಮ್ ಮಂದಿರ ಟ್ರಸ್ಟ್ ನ ಸದಸ್ಯರು ಚಂಪತ್ ರಾಯ್ ಅವರನ್ನು ಸ್ವಾಗತಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296