ಪಕ್ಕದ ಮನೆಯ ಯುವತಿ ನಿತ್ಯ ಮನೆ ಮುಂದಿನ ರಂಗೋಲಿಯನ್ನು ತುಳಿದು ಅಳಿಸಿ ಹಾಕಿ, ಕಿರುಕುಳ ನೀಡುತ್ತಿದ್ದಾಳೆ ಎಂದು ದಂಪತಿ ದೂರಿದ್ದಾರೆ. ನೆರೆ-ಹೊರೆಯವರ ಗಲಾಟೆ ಪ್ರಕರಣವು ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯ ಅಪಾರ್ಟಮೆಂಟ್ನಲ್ಲಿ ನಡೆದಿದೆ.
ಪಕ್ಕದ ಮನೆಯಾಕೆ ರಂಗೋಲಿ ಅಳಿಸುವುದು, ಶೂ ರ್ಯಾಕ್ ಅನ್ನು ಕಾಲಿನಲ್ಲಿ ಒದ್ದು ಬೀಳಿಸುತ್ತಿದ್ದಾಳೆ. ಈ ರೀತಿ ಸಾಕಷ್ಟು ಬಾರಿ ಮಾನಸಿಕ ಕಿರಿಕುಳ ನೀಡುತ್ತಿದ್ದಾಳೆ ಎಂದು ಸರಿತಾ ಎಂಬಾಕೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊ ಪೋಸ್ಟ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಈಕೆಯಿಂದ ಮಾನಸಿಕವಾಗಿ ಕಿರುಕುಳವಾಗುತ್ತಿದೆ. ಪ್ರತಿ ದಿನ ಜಗಳವಾಡಲು ಆಗುವುದಿಲ್ಲ.
ಪ್ರಶ್ನೆ ಮಾಡಿದರೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾಳೆ ಎಂದು ಸರಿತಾ ಶಿಂಧೆ ಪೋಸ್ಟ್ ಮಾಡಿದ್ದಾರೆ. ಇನ್ನೂ ನಾವು ದೂರು ಕೊಟ್ಟರೆ ಪೊಲೀಸರು ಎನ್ಸಿಆರ್ ಮಾಡುತ್ತಾರೆ. ಆದರೆ ನಮ್ಮ ಮೇಲೆ ಪ್ರತಿ ದೂರು ಕೊಟ್ಟರೆ ಎಫ್ಐಆರ್ ಮಾಡುತ್ತಾರೆ ಎಂದು ದಂಪತಿ ದೂರಿದ್ದಾರೆ ಎಂದು ವರದಿ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


