ತಮಿಳುನಾಡು: ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ದೇಶಾದ್ಯಂತ ಭಾರೀ ಫ್ಯಾನ್ ಫಾಲೋಯಿಂಗ್ ಇದೆ. ಇದೀಗ ಅವರ ಅಭಿಮಾನಿಯೊಬ್ಬರು ಅವರಿಗಾಗಿ ದೇಗುಲವನ್ನು ನಿರ್ಮಿಸಿದ್ದಾರೆ.
ಮಧುರೈನ ಕಾರ್ತಿಕ್ ಎಂಬ ರಜನಿಕಾಂತ್ ಅಭಿಮಾನಿ ಅವರಿಗಾಗಿ ದೇವಾಲಯವನ್ನು ನಿರ್ಮಿಸಿದರು. ಆ ದೇವಸ್ಥಾನದಲ್ಲಿ 250 ಕೆಜಿ ತೂಕದ ರಜನಿಕಾಂತ್ ವಿಗ್ರಹವನ್ನು ಸ್ಥಾಪಿಸಲಾಗಿದೆ.
ಆ ಪ್ರತಿಮೆಯ ಕೆಳಗೆ, ಅಭಿಮಾನಿ ತನ್ನ ಹೆತ್ತವರ ಫೋಟೋ ಮತ್ತು ಗಣೇಶನ ಫೋಟೋವನ್ನು ಇರಿಸಿದ್ದು, ಪ್ರತಿ ದಿನ ರಜನಿಕಾಂತ್ ವಿಗ್ರಹಕ್ಕೆ ಆರತಿ, ಅಭಿಷೇಕ ಮತ್ತು ಪೂಜೆ ಸಲ್ಲಿಸುತ್ತಾನೆ.


