ಬೆಂಗಳೂರು: ಪಶ್ಚಿಮ ವಲಯದಲ್ಲಿರುವ ಟೌನ್ ಪ್ಲಾನಿಂಗ್ ವಿಭಾಗದ ಕಚೇರಿಗೆ ನುಗ್ಗಿ ಅಧಿಕಾರಿ ಮೋನಿಕಾ ಅವರಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ನಗರದ ಶೇಷಾದ್ರಿಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅರುಣ್ ಕುಮಾರ್ ಬಂಧಿತ ಆರೋಪಿ, ಮತ್ತೊಬ್ಬ ಆರೋಪಿ ಬಂಧನಕ್ಕೆ ತನಿಖೆ ಮುಂದುವರಿದಿದೆ.
ಕಚೇರಿಗೆ ನುಗ್ಗಿದ ಆರೋಪಿಗಳು ಕೋಣೆ ಬಾಗಿಲು ಮುಚ್ಚಿ ಮೋನಿಕಾ ಅವರ ವಿಡಿಯೋ ಚಿತ್ರೀಕರಿಸಿ ಬೆದರಿಸಿದರು. ಗಾಬರಿಗೊಂಡ ಅವರು ಕಚೇರಿಯಿಂದ ಹೊರಕ್ಕೆ ಓಡಿ ಬಂದಿದ್ದು, ಬಳಿಕ ಶೇಷಾದ್ರಿಪುರಂ ಠಾಣೆಗೆ ದೂರು ನೀಡಿದ್ದರು


