ಬೆಂಗಳೂರು: ಬೆಂಗಳೂರಿನ ನಾಗಶೆಟ್ಟಿಹಳ್ಳಿಯಲ್ಲಿ ರೌಡಿ ಶೀಟರ್ ಒಬ್ಬ ತನ್ನ ಸ್ನೇಹಿತನನ್ನು ಡ್ರ್ಯಾಗರ್ ನಿಂದ ಇರಿದು ಹತ್ಯೆಗೈದ ಘಟನೆ ನಡೆದಿದೆ. ಮೂರ್ತಿ(45) ವರ್ಷ ಕೊಲೆಯಾದ ಆಟೋ ಡ್ರೈವರ್ ಆಗಿದ್ದು, ಶರಣಪ್ಪ ಕೊಲೆ ಮಾಡಿದ ಆರೋಪಿಯಾಗಿದ್ದಾರೆ.
ಮೂರ್ತಿಗೆ ರೌಡಿಶೀಟರ್ ಶರಣಪ್ಪ ಕೆಲ ವರ್ಷಗಳಿಂದ ಪರಿಚಯವಿದ್ದ. ನಿನ್ನೆ ಇಬ್ಬರೂ ನಾಗಶೆಟ್ಟಹಳ್ಳಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ನಂತರ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಈ ಜಗಳವು ತಾರಕಕ್ಕೇರಿದ್ದು ರೌಡಿಶೀಟರ್ ಶರಣಪ್ಪ ಮೂರ್ತಿಗೆ ಡ್ಯಾಗರ್ ನಿಂದ ಹಲವು ಬಾರಿ ಇರಿದಿದ್ದು, ತೀವ್ರ ರಕ್ರಸ್ರಾವವಾಗಿ ಮೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296