ಬೆಂಗಳೂರು: ಹೆಂಡತಿ ನಂಬರ್ ಕೊಡು ಎಂದಿದ್ದಕ್ಕೆ ರೊಚ್ಚಿಗೆದ್ದ ರೌಡಿಶೀಟರ್ ತನ್ನ ಸ್ನೇಹಿತನನ್ನೇ ರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಈ ಸಂಬಂಧ ಚಂದ್ರಲೇಔಟ್ ಪೊಲೀಸರು ರೌಡಿಶೀಟರ್ ಕೆಂಪೇಗೌಡನನ್ನು ಬಂಧಿಸಿದ್ದಾರೆ.
ರಮೇಶ್ ಹಾಗೂ ಕೆಂಪೇಗೌಡ ಸ್ನೇಹಿತರಾಗಿದ್ದರು. ಬಾರ್ ನಲ್ಲಿ ಒಟ್ಟಿಗೆ ಕುಳಿತು ಕುಡಿದು ಅಂಗಡಿ ಮುಂದೆ ಬಂದು ನಿಂತಿದ್ದರು. ಈ ವೇಳೆ ಕೆಂಪೇಗೌಡನಿಗೆ ನಿನ್ನ ಪತ್ನಿ ನಂಬರ್ ಕೊಡು ಎಂದು ರಮೇಶ್ ಕೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಕೆಂಪೇಗೌಡ ರಮೇಶ್ ಕಪಾಳಕ್ಕೆ ಹೊಡೆದಿದ್ದಾನೆ.


