ಬೆಂಗಳೂರು: ನೆಕ್ಸಸ್ ಕೋರಮಂಗಲ ಪಬ್ ನಲ್ಲಿ ಓಣಂ ಆಚರಿಸುತ್ತಿದ್ದ ಕೇರಳದ ಐದು ಯುವಕರ ಮೇಲೆ ಗುಂಪೊಂದು ದಾಳಿ ನಡೆಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಕೇರಳ ಯುವಕರು ಪಬ್ ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ಆರೋಪಿಗಳು ತೊಂದರೆ ಕೊಡಲು ಆರಂಭಿಸಿದ್ದಾರೆ. ಅವರಲ್ಲಿ ಒಬ್ಬ ಪದೇ ಪದೇ ಡ್ಯಾನ್ಸ್ ಮಾಡುತ್ತಿದ್ದವರನ್ನು ತಳ್ಳುತ್ತಿದ್ದ, ಇದರಿಂದ ಕೋಪಗೊಂಡ ಕೇರಳ ಯುವಕರ ತಂಡದಲ್ಲಿದ್ದ ಒಬ್ಬ ಆರೋಪಿಗಳಲ್ಲಿ ಒಬ್ಬನನ್ನು ನೆಲಕ್ಕೆ ತಳ್ಳಿದ್ದಾನೆ.
ಹೊರಗೆ ಹೋದ ಆರೋಪಿ ಬಟ್ಟೆ ಬದಲಿಸಿ ವಾಪಸ್ ಬಂದಿದ್ದಾನೆ. ನಂತರ ಅವರು ಸಂತ್ರಸ್ತರ ಮೇಲೆ ಗಾಜಿನ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಇಬ್ಬರು ಸಂತ್ರಸ್ತರ ಮುಖ ಗಾಯಗೊಂಡು ರಕ್ತಸ್ರಾವವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅವರಲ್ಲಿ ಒಬ್ಬರು ಡಿಸ್ಚಾರ್ಜ್ ಆಗಿದ್ದರೆ, ಇನ್ನೊಬ್ಬ ಯುವಕನ ಮುಖ ವಿರೂಪಗೊಂಡಿದ್ದು ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ.


