ಗಂಡನೇ ತನ್ನ ಹೆಂಡತಿ ಹಾಗೂ ಮಗನನ್ನು ಹತ್ಯೆ ಮಾಡಿ ಪರಾರಿಯಾಗಿರುವುದಾಗಿ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಬಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೆ ಸದ್ಯಕ್ಕೆ ಕಾರಣ ತಿಳಿದು ಬಂದಿಲ್ಲ.
ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ರವೀಂದ್ರನಾಥ ಗುಡ್ಡೆಯಲ್ಲಿ ಈ ಜೋಡಿ ಹತ್ಯೆ ನಡೆದಿದೆ. ನವನೀತಾ (35) ಹಾಗೂ ಪುತ್ರ ಸಾಯಿ ಸೃಜನ್ (8) ಕೊಲೆಯಾದವರು. ಚಂದ್ರು (38) ಪತ್ನಿಗೆ ಚಾಕುವಿನಲ್ಲಿ ಇರಿದು, ಹತ್ಯೆ ಮಾಡಿರುವ ಆರೋಪಿ.


