ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಹೋಬಳಿಯ ನಾಗದೇವನಹಳ್ಳಿ ಗ್ರಾಮದಲ್ಲಿ ಹಳೆ ದ್ವೇಷ ಹಾಗೂ ಜಮೀನು ವಿವಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಬರ್ಬರ ಕೊಲೆಯಾಗಿದೆ. ಸೀನಪ್ಪ(41) ಕೊಲೆಯಾದ ವ್ಯಕ್ತಿಯಾಗಿದ್ದಾರೆ.
ರಕ್ತ ಸಂಬಂಧಿಗಳ ನಡುವೆಯೇ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿದೆ. ನರಸಿಂಹಯ್ಯ ಹಾಗೂ ಅವರ ತಮ್ಮ ಅಬ್ಬಯ್ಯ ನಡುವೆ ಪಿತ್ರಾರ್ಜಿತ ಜಮೀನು ವಿವಾದ ಇತ್ತು. ಇದೇ ಜಮೀನು ವಿವಾದಕ್ಕೆ 2015ರಲ್ಲಿ ನರಸಿಂಹಯ್ಯನ ಮೊದಲ ಮಗ ಕೊಲೆಯಾಗಿದ್ದ. ಈ ಕಾರಣಕ್ಕೆ ನರಸಿಂಹಯ್ಯ ಕುಟುಂಬ ಸಿಟ್ಟಾಗಿತ್ತು.
ಹೀಗಾಗಿ ಹಳೇ ವೈಷಮ್ಯ ಹಾಗೂ ಜಮೀನು ಗಲಾಟೆ ಕೋಪಕ್ಕೆ ಅಬ್ಬಯ್ಯನ ಅಳಿಯ ಸೀನಪ್ಪನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


