ಕೊರಟಗೆರೆ: ಚಿರತೆಯೊಂದು ಸಾಕು ನಾಯಿಯನ್ನು ಬೇಟೆಯಾಡಿದ ಘಟನೆ ಕೊರಟಗೆರೆ ತಾಲೂಕಿನ ಕೂಡ್ಲಹಳ್ಳಿ ಗ್ರಾಮದ ರೈತ ಶಿವಶಂಕರ ಆರಾಧ್ಯ ಅವರ ಜಮೀನಿನಲ್ಲಿ ನಡೆದಿದೆ.
ಮಂಗಳವಾರ ಸಂಜೆ ಶಿವಶಂಕರ ಆರಾಧ್ಯ ಜಮೀನಿನಿಂದ ಮನೆ ಕಡೆ ಹಸುಗಳನ್ನು ಹೊಡೆದುಕೊಂಡು ಹೋಗುವ ಸಂದರ್ಭದಲ್ಲಿಈ ಘಟನೆ ನಡೆದಿದೆ.
ರೈತ ಶಿವಶಂಕರ ಆರಾಧ್ಯೆಗೆ ಚಿರತೆ ಕಾಣಿಸಿಕೊಂಡಿದ್ದು, ಹಸುಗಳನ್ನು ಮುಂದೆ ಸಾಗಿಸುವಷ್ಟರಲ್ಲಿ ಅವರ ಸಾಕು ನಾಯಿಯನ್ನು ಚಿರತೆ ಎಳೆದೊಯ್ದ ಸ್ಥಳದಿಂದ ಪರಾರಿಯಾಗಿದೆ. ಮರುದಿನ ಬೆಳಗ್ಗೆ ನೋಡಿದಾಗ ರೈತನ ಸಾಕು ನಾಯಿಯ ಕಳೆಬೇರ ಪತ್ತೆಯಾಗಿದೆ.
ಮೂರು ದಿನಗಳಿಂದ ಜಮೀನುಗಳಲ್ಲಿ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿದ್ದು ಇದರಿಂದ ರೈತರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇನ್ನು ಚಿರತೆಯನ್ನು ಸೆರೆ ಹಿಡಿಯಲು ರೈತ ಶಿವಶಂಕರ್ ಆರಾಧ್ಯ ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ರೈತರು ನೀಡಿದ ದೂರಿನ ಅನ್ವಯ ಜಮೀನಿಗೆ ಭೇಟಿ ಕೊಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ಬೋನ್ ಇಡುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296