ನಟಿ ತಮನ್ನಾ ಭಾಟಿಯಾ ಬಗ್ಗೆ ಬೆಂಗಳೂರಿನ ಸಿಂಧಿ ಶಾಲೆಯೊಂದರಲ್ಲಿ ಪಠ್ಯ ವಿಷಯವಾಗಿ ಸೇರಿಸಲಾಗಿದೆ. ಇದರ ವಿರುದ್ಧ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಹೆಬ್ಬಾಳದಲ್ಲಿರುವ ʼಸಿಂಧಿ ಹೈಸ್ಕೂಲ್’ನಲ್ಲಿನ ಪಠ್ಯದಲ್ಲಿ ತಮನ್ನಾ ಬಗೆಗಿನ ಪಠ್ಯ ಸೇರಿಸಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಸಿಂಧಿ ಮಹನೀಯರ ಕುರಿತು ಸೇರಿಸಲಾದ ಅಧ್ಯಾಯದಲ್ಲಿ ತಮನ್ನಾ ಭಾಟಿಯಾ ಕುರಿತ ವಿವರವೂ ಇದೆ. ಇದಕ್ಕೆ ಇಲ್ಲಿ ಓದುತ್ತಿರುವ ಏಳನೇ ತರಗತಿ ಮಕ್ಕಳ ಪೋಷಕರು ಆಕ್ರೋಶ ಹೊರ ಹಾಕಿದ್ದು,ದೂರು ದಾಖಲಿಸಿದ್ದಾರೆ. ಅಧ್ಯಾಯ ಸೇರ್ಪಡೆ ಕುರಿತು ಪೋಷಕರು ಶಾಲೆಯ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿ, ʼಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್’ ಅನ್ನು ಸಂಪರ್ಕಿಸುವಂತೆ ತಿಳಿಸಿದೆ ಎನ್ನಲಾಗಿದೆ.
ಸಿಂಧಿ ಸಮುದಾಯದ ಹಿರಿಯ ಕಲಾವಿದರ ಕುರಿತ ಅಧ್ಯಾಯಗಳ ಬೋಧನೆ ಬಗ್ಗೆ ಸಮಸ್ಯೆ ಇಲ್ಲ. ಆದರೆ ತಮನ್ನಾ ಭಾಟಿಯಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಕಿದರೆ ಅರೆಬರೆ ಬಟ್ಟೆಯ, ಅಸೂಕ್ತವಾದ ವಿಷಯ ಕಾಣಿಸುತ್ತದೆ. ಹೀಗಾಗಿ ಇವರ ಬಗ್ಗೆ ಮಕ್ಕಳಿಗೆ ಹೇಳಿ ಕೊಡುವುದು ಸೂಕ್ತ ಅಲ್ಲ ಎಂದು ಪೋಷಕರು ಆಡಳಿತ ಮಂಡಳಿಗೆ ದೂರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


