ಬೆಂಗಳೂರು ಮಾತ್ರಲ್ಲದೆ ರಾಜ್ಯದಾದ್ಯಂತ ಈಗ ಬಿಸಿಲಿನ ತಾಪ ಹೆಚ್ಚಾಗಿದೆ. ನೀರಿನ ಹಾಹಾಕರ ಶುರುವಾಗಿದೆ. ಈ ಸಮಯದಲ್ಲಿ ಅವರಿಗೆ ಸರಿಯಾದ ಆಹಾರ ಅಥವಾ ನೀರಿನ ಪೂರೈಕೆ ಇಲ್ಲ. ಸರಿಯಾದ ವಾಶ್ ರೂಮ್ ವ್ಯವಸ್ಥೆ, ಅದರಲ್ಲೂ ಮಹಿಳೆ ಪೊಲೀಸರಿಗೆ ಮುಟ್ಟು ಅಥವಾ ಇನ್ನಿತರ ಸಮಸ್ಯೆ ಕಾಡಿದಾಗ ಅವರಿಗೆ ಬೇಕಾದ ಸೌಕರ್ಯಗಳು ಇಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಇವುಗಳ ನಡುವೆ ಅವರು ಜನರಿಗಾಗಿ ಕೆಲಸ ಮಾಡಬೇಕಿದೆ.
ಆದರೆ ಇನ್ನೊಬ್ಬ 60 ವರ್ಷದ ಅಜ್ಜ ನಮಗಾಗಿ ಕೆಲಸ ಮಾಡುವ ಈ ಟ್ರಾಫಿಕ್ ಪೊಲೀಸರಿಗೆ ಪ್ರತಿದಿನ ನೀರು ನೀಡಿ ಅವರ ದಾಹವನ್ನು ನೀಗಿಸುತ್ತಿದ್ದಾರೆ. ನೀರ್ ಸಾಬ್ (ವಾಟರ್ ಮ್ಯಾನ್) ಎಂದು ಕರೆಯುವ 60 ವರ್ಷ ವಯಸ್ಸಿನ ಸೈಯದ್ ಮಜೀದ್ ಅವರು ಬಳ್ಳಾರಿ ರಸ್ತೆಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳಿಗೆ ನೀರಿನ ಬಾಟಲಿಗಳನ್ನು ನೀಡಿ, ಅವರಿಗೆ ಸಹಾಯ ಮಾಡುತ್ತಿದ್ದಾರೆ. ಎರಡು ವರ್ಷಗಳಿಂದ ಮಜೀದ್ ತಮ್ಮನ್ನು ಈ ಕಾರ್ಯದಲ್ಲಿ ತೋಡಗಿಸಿಕೊಂಡಿದ್ದಾರೆ.
ಇವರ ಈ ಕಾರ್ಯಕ್ಕೆ ಸಂಚಾರ ಡಿಸಿಪಿ (ಉತ್ತರ ಬೆಂಗಳೂರು) ಸಿರಿ ಗೌರಿ ತಮ್ಮ ಕಚೇರಿಯಲ್ಲಿ ಸನ್ಮಾನ ಮಾಡಿದ್ದಾರೆ. ಬೆಂಗಳೂರು ಈ ಹಿಂದೆ ತುಂಬಾ ಉತ್ತಮವಾಗಿತ್ತು. ಜನರು ನಮ್ಮ ಕಷ್ಟ ನೋಡಿ ಏನಾದರೂ ಸಹಾಯ ಮಾಡುತ್ತಿದ್ದರು. ಆದರೆ ಇದೀಗ ಕೆಲವೊಂದು ಪೊಲೀಸರು, ಪೋಸ್ ನೀಡಿ, ಜನರ ಜತೆಗೆ ಅಸಭ್ಯವಾಗಿ ನಡೆದುಕೊಂಡ ಕಾರಣ ಜನ ಪೊಲೀಸರಿಂದ ದೂರ ಇದ್ದಾರೆ. ಈ ಹಿಂದೆ ನಮ್ಮ ದಾಹ ಕಡಿಮೆ ಮಾಡಲು ಮಜ್ಜಿಗೆ, ನೀರು, ತಂಪು ಪಾನೀಯಾಗಳನ್ನು ತಂದು ನೀಡುತ್ತಿದ್ದರು, ಈಗ ಸೈಯದ್ ಈ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296