ದಟ್ಟ ಅರಣ್ಯಕ್ಕೆ ಚಾರಣಕ್ಕೆಂದು ತೆರಳಿದ್ದ ಬೆಂಗಳೂರು ಮೂಲದ ವ್ಯಕ್ತಿ ಹಿಮಾಚಲ ಪ್ರದೇಶದ ಮನಾಲಿಯ ಜೋಗಿನಿ ಜಲತಾದ ಬಳಿ ಶವವಾಗಿ ಪತ್ತೆಯಾಗಿದ್ದಾರೆ.
ರಾಹುಲ್ ರಮೇಶ್ (35) ಮೃತ ವ್ಯಕ್ತಿ. ಸದ್ಯ ಮೃತದೇಹವನ್ನು ಜಲಪಾತದ ಕಮರಿಯಿಂದ ಹೊರತೆಗೆಯಲಾಗಿದೆ.
ರಮೇಶ್ ಅವರು ಸೆ. 28ರಂದು ದಟ್ಟ ಅರಣ್ಯ ಪ್ರದೇಶಕ್ಕೆ ಚಾರಣಕ್ಕೆಂದು ತೆರಳಿದ್ದ ವೇಳೆ ನಾಪತ್ತೆಯಾಗಿದ್ದರು. ಅಂದು ಸಂಜೆ 5. 30ರ ಸುಮಾರಿಗೆ ತಾನು ಕಾಡಿನಲ್ಲಿ ದಾರಿ ತಪ್ಪಿದ್ದಾಗಿ ತನ್ನ ಸಹೋದರನಿಗೆ ಸಂದೇಶ ಕಳುಹಿಸಿದ್ದರು.


