ಕಲಬುರಗಿ ಜಿಲ್ಲೆಯ ಮಾದನ ಹಿಪ್ಪರಗಿಯಲ್ಲಿ ಮುಸ್ಲಿಂ ಕುಟುಂಬವೊಂದು ಮಗನ ಮದುವೆಯನ್ನು ದೇವಾಲಯದ ಎದುರು ಮಾಡಿಸಿದ ಘಟನೆ ನಡೆದಿದೆ.
ಮಹಿಬೂಬ್ ಅಹ್ಮದ್ ಹಾರಕೂಡ ಎಂಬುವರ ಪುತ್ರ ಸಿಕಂದರ್ ಮದುವೆ ಗ್ರಾಮದ ಖಂಡೇಶ್ವರ ಪಾದಗಟ್ಟೆ ಎದುರು ವಿಜೃಂಭಣೆಯಿಂದ ನಡೆದಿದೆ. ಮದುವೆ ಶಾಸ್ತ್ರ ಮುಸ್ಲಿಂ ಧರ್ಮದ ಪ್ರಕಾರ ನಡೆದಿದ್ದು ಬಿಟ್ಟರೆ ಉಳಿದೆಲ್ಲವೂ ಲಿಂಗಾಯತ ಸಂಪ್ರದಾಯದ ಪ್ರಕಾರ ನಡೆಯಿತು ಎಂದು ವರದಿ ತಿಳಿಸಿದೆ.
ಈ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ನೂರಾರು ಮನೆಗಳಿವೆ. ಇಲ್ಲಿಯವರೆಗೆ ಅವರೆಲ್ಲರೂ ಗ್ರಾಮದಲ್ಲಿರುವ ಎರಡೂ ದರ್ಗಾಗಳ ಎದುರು ವೇದಿಕೆ ಹಾಕಿ ಮದುವೆ ಮಾಡಿಸುತ್ತಿದ್ದರು. ಆದರೆ ಮಹಿಬೂಬ್ ಹಿಂದೂ ಸಮಾಜದವರೊಂದಿಗೆ ಕೂಡಿ ಖಂಡೇಶ್ವರನ ಪಾದುಕೆ ದೇಗುಲದ ಎದುರು ಮದುವೆ ಮಾಡಿಸಿ ಸುದ್ದಿಯಾಗಿದ್ದಾರೆ.


