ಕೊರಟಗೆರೆ : ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಶ್ರೀ ಸಿದ್ದೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ನುರಿತ ರಂಗಭೂಮಿ ಕಲಾವಿದರಿಂದ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ವೇಣುಗೋಪಾಲ ಸ್ವಾಮಿ ಡ್ರಾಮಾ ಸೀನ್ಸ್ ಚಿಂತಾಮಣಿ ಇವರು ನಿರ್ಮಿಸಲಿರುವ ಜಗಜಗಿಸುವ ವಿದ್ಯುತ್ ದೀಪಾಲಂಕಾರದಿಂದ ಅಲಂಕೃತವಾದ ಭವ್ಯ ವೇದಿಕೆಯಲ್ಲಿ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠ ಸಿದ್ದರಬೆಟ್ಟದ ಪೀಠಾಧ್ಯಕ್ಷರಾದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿರವರ ದಿವ್ಯ ಸಾನಿಧ್ಯದಲ್ಲಿ ಕರ್ನಾಟಕ ಸರ್ಕಾರದ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ರವರ ಅಧ್ಯಕ್ಷತೆಯಲ್ಲಿ, ದಿನಾಂಕ : 07/04/2025 ರ ಸೋಮವಾರ ರಾತ್ರಿ 8 ಗಂಟೆಗೆ ಸರಿಯಾಗಿ ಕ್ಷೇತ್ರ ಪಾಲಕ ಶ್ರೀ ಸಿದ್ದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಪೌರಾಣಿಕ ನಾಟಕವಾದ ವಿರಾಟ ಪರ್ವ ಅಥವಾ ಕೀಚಕನ ವಧೆ ಎಂಬ ನಾಟಕ ನಡೆಯಲಿದೆ.
ಹಾರ್ಮೋನಿಯಂ ಮತ್ತು ಸಂಗೀತ ನಿರ್ದೇಶನವನ್ನು ಹಿರಿಯ ಕಲಾವಿದ ಕೃಷ್ಣಮೂರ್ತಪ್ಪರ ಪುತ್ರ ಜಯಸಿಂಹ ಮತ್ತು ಬೆಳ್ಳಿ ಕಿರೀಟ ಪುರಸ್ಕೃತರಾದ ಗಣೇಶ್ ಮಲ್ಲೇಕಾವು ನುಡಿಸಲಿದ್ದಾರೆ. ತಬಲಾ ಕ್ಯಾಶ್ಯೂ ಪಿಟೀಲು ಮತ್ತು ತಾಳವಾದ್ಯ ಇವುಗಳನ್ನು ಮಾರುತಿ ಎಂ.ಎಚ್. ಗಣೇಶ್ ಕೃಷ್ಣಮೂರ್ತಿ ನಾಗರಾಜು ವಾದ್ಯಗೋಷ್ಠಿಯನ್ನು ನಡೆಸಿ ಕೊಡಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಅಕ್ಕ ಪಕ್ಕದ ಊರಿನ ಗ್ರಾಮಸ್ಥರು ರಂಗಭೂಮಿ ಕಲಾವಿದರು ಜನಪ್ರತಿನಿಧಿಗಳು ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿಯ ಭಕ್ತರು ಹಾಜರಿದ್ದು ,ಈ ನಾಟಕವನ್ನು ಯಶಸ್ವಿಯನ್ನಾಗಿಸಬೇಕೆಂದು ಸಿದ್ದೇಶ್ವರ ಕೃಪಾ ಪೋಷಿತ ನಾಟಕ ಮಂಡಳಿಯ ಎಲ್ಲ ಕಲಾವಿದರು ಆಮಂತ್ರಣ ನೀಡಿದ್ದಾರೆ..
ಪೌರಾಣಿಕ ನಾಟಕಕ್ಕೆ ಹೆಚ್ಚಿನ ಸಹಕಾರವನ್ನು ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪ್ರಸನ್ನ ಕುಮಾರ್, ಮಹಾಲಿಂಗಪ್ಪ,ಇಂಜಿನಿಯರ್ ಕೃಷ್ಣಪ್ಪ, ನರಸಿಂಹಮೂರ್ತಿ ನೇಗಲಾಲ, ಪ್ರದೀಪ್ ಸಿದ್ದರಬೆಟ್ಟ,ಅರವಿಂದ್, ಪುಟ್ಟ ನರಸಪ್ಪ, ಗೊಂದಿಹಳ್ಳಿ ರಂಗರಾಜು,ಗ್ರಾಮ ಪಂಚಾಯತಿ ಅಧ್ಯಕ್ಷ ಕವಿತಾ ರಮೇಶ್, ಉಪಾಧ್ಯಕ್ಷರಾದ ಕಾಂತರಾಜು,ಅಖಂಡರಾಧ್ಯ, ಸುರೇಶ್ ಎನ್ ಎಸ್,ಪತ್ರಕರ್ತರಾದ ಮಂಜುಸ್ವಾಮಿ ಎಂ ಎನ್ ಮತ್ತು ಸಿದ್ದೇಶ್ ನೀಡಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW