ಬೆಂಗಳೂರು: ಏರ್ಪೋರ್ಟ್ ನಲ್ಲಿ ಬಾಂಬ್ ಇದೆ ಅಂತಾ ಜೋಕ್ ಮಾಡಿ ಪ್ರಯಾಣಿಕನೋರ್ವ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಯಾಣಿಕ ಹರಿಯಾಣ ಮೂಲದ ರಾಜೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜಧಾನಿ ಬೆಂಗಳೂರಿನ ಕೆಐಎಎಲ್ ಏರ್ಪೋರ್ಟ್ ನಲ್ಲಿ ಪ್ರಯಾಣಿಕನ ಅವಾಂತರ ಕಂಡು ಬಂದಿದೆ. ಬಾಂಬ್ ಇದೆ ಅಂತಾ ಜೋಕ್ ಮಾಡಿ ಪ್ರಯಾಣಿಕ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಯಾಣಿಕನನ್ನ ವಶಕ್ಕೆ ಪಡೆದು ಪೊಲೀಸರಿಗೆ ಅಧಿಕಾರಿಗಳು ಒಪ್ಪಿಸಿದ್ದಾರೆ.
ಬೆಂಗಳೂರಿನಿಂದ ಪುಣೆಗೆ ರಾಜೇಶ್ ಕುಮಾರ್ ಹೊರಟಿದ್ದ. ಟರ್ಮಿನಲ್-2 ನಲ್ಲಿ ಚೆಕ್ ಇನ್ ವೇಳೆ ಅವಾಂತರ ಕಂಡು ಬಂದಿದೆ. ಚೆಕ್ ಇನ್ ವೇಳೆ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಪ್ರಯಾಣಿಕ ಹೇಳಿದ್ದ. ಇದರಿಂದ ಆತಂಕಗೊಂಡು ಪ್ರಯಾಣಿಕನ ಬ್ಯಾಗ್ ತಪಾಸಣೆ ಮಾಡಿದ್ದಾರೆ. ನಂತರ ಪ್ರಯಾಣಿಕನನ್ನ ಕೆಐಎಎಲ್ ಪೊಲೀಸರಿಗೆ ಅಧಿಕಾರಿಗಳು ಒಪ್ಪಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಚೆಕ್ ಇನ್ ವೇಳೆ ಜೋಕ್ ಮಾಡಿದ್ದಾಗಿ ಪ್ರಯಾಣಿಕ ಹೇಳಿದ್ದಾನೆ. ರಾಜೇಶ್ ಕುಮಾರ್ ವಿರುದ್ಧ ಕೆಐಎಎಲ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಬಂಧನ ಪ್ರಕ್ರಿಯೆ ಮುಗಿಸಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


