ಬಾಗಲಕೋಟೆ: ಖಾಸಗಿ ಸುದ್ದಿ ವಾಹಿನಿಯ ವರದಿಗಾರನೊಬ್ಬ ಅಶ್ಲೀಲ ವಿಡಿಯೋ ತಯಾರಿಸಿ ಬಿಜೆಪಿ ಕಾರ್ಯಕರ್ತೆಗೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಪ್ರಕರಣ ಸಂಬಂಧ ಜಮಖಂಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂದೆನವಾಜ್ ಸರಕಾವಸ್ ಎಂಬುವವನು ಕೃತ್ಯ ಎಸಗಿದ್ದಾನೆ. ಖಾಸಗಿ ಸುದ್ದಿ ವಾಹನಿ ವರದಿಗಾರ ಎಂದು ಹೇಳಿಕೊಂಡು ತಿರುಗಾಡುವ ಬಂದೆನವಾಜ್ ಸರಕಾವಸ್ ಜಮಖಂಡಿ ಬಿಜೆಪಿ ನಗರಮಂಡಳ ಅಧ್ಯಕ್ಷೆ, ಖಾಸಗಿ ಶಾಲಾ ಶಿಕ್ಷಕಿ ಗೀತಾ ಸೂರ್ಯವಂಶಿ ಅವರ ಅಶ್ಲೀಲ ವೀಡಿಯೊ ತಯಾರಿಸಿದ್ದಾನೆ.
ಗೀತಾ ಸೂರ್ಯವಂಶಿ ಅವರ ಭಾವಚಿತ್ರದ ಕಣ್ಣಿಗೆ ಕಪ್ಪು ಪಟ್ಟಿ ಅಂಟಿಸಿದ್ದಾನೆ. ಬಳಿಕ ಅವರದ್ದೇ ಅಶ್ಲೀಲ ವಿಡಿಯೋ ಎಂಬಂತೆ ಬಿಂಬಿಸಲು ಯಾವುದೋ ಪೋರ್ನ್ ದೃಶ್ಯವನ್ನು ಎಡಿಟ್ ಮಾಡಿ ವಿಡಿಯೋ ತಯಾರಿಸಿದ್ದಾನೆ. ಅದಕ್ಕೆ ಬಿಜೆಪಿ ಕಾರ್ಯಕರ್ತೆಯ ರಾಸಲೀಲೆ ಎಂದು ಬರಹ ಹಾಕಿದ್ದು, ಎಮ್ಮೊ ಎಮ್ಮೊ ನೋಡ್ದೆ ನೋಡ್ದೆ ಹಾಡು ಅಳವಡಿಸಿದ್ದಾನೆ. ಈ ಸಂಬಂಧ ಗೀತಾ ಸೂರ್ಯವಂಶಿ ಅವರು ಜಮಖಂಡಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


