ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಂದೂಕು ಆಕಸ್ಮಿಕವಾಗಿ ಸಿಡಿದು ರಾಯಚೂರು ಮೂಲದ ಯೋಧರೊಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ. ಮಾನ್ವಿ ತಾಲೂಕಿನ ಆರ್.ಜಿ. ಕ್ಯಾಂಪ್ನ ಯೋಧ ರವಿಕಿರಣ್(37) ಹುತಾತ್ಮರಾದವರು ಎಂದು ಗುರುತಿಸಲಾಗಿದೆ.
ಚೆನ್ನೈ ಏರ್ ಪೋರ್ಟ್ ಸಮೀಪದ ಕಲ್ಪಾಕ್ಕಂ ಬಳಿ ಈ ದುರ್ಘಟನೆ ನಡೆದಿದೆ. ಚೆನ್ನೈನಲ್ಲಿ ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಲಾಗಿದೆ. ನೈಟ್ ಡ್ಯೂಟಿ ಮುಗಿಸಿ ಕ್ಯಾಂಪ್ ನತ್ತ ತೆರಳುವ ವೇಳೆ ಘಟನೆ ನಡೆದಿದೆ. ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಗನ್ ಆಕಸ್ಮಿಕವಾಗಿ ಸಿಡಿದಿದೆ.
ಇಂಡಿಯನ್ ಸ್ಮಾಲ್ ಆರ್ಮ್ಸ್ ಸಿಸ್ಟಮ್ ರೈಫಲ್ನ ಬುಲೆಟ್ ರವಿಕಿರಣ್ ಕುತ್ತಿಗೆಯ ಭಾಗಕ್ಕೆ ತಗುಲಿದೆ ಎನ್ನಲಾಗಿದೆ. ಕೇಂದ್ರೀಯ ಔದ್ಯಮಿಕ ಭದ್ರತಾ ಸಂಸ್ಥೆ (CISF) ಯೋಧರಾದ ರವಿಕಿರಣ್ ಕಲ್ಪಾಕ್ಕಂ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


