ಕುಡಿದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ ಘಟನೆ ದಾವಣಗೆರೆ ತಾಲೂಕಿನ ನೇರಲಿಗೆ ಗ್ರಾಮದಲ್ಲಿ ನಡೆದಿದೆ. ಶಾಂತಿಬಾಯಿ 70 ವರ್ಷ ಹೆತ್ತ ಮಗನಿಂದಲೇ ಹತ್ಯೆಯಾದ ದುರ್ದೈವಿ. ಮಗ ಲೋಕೇಶ ನಾಯ್ಕ ಮದ್ಯವ್ಯಸನಿಯಾಗಿದ್ದು, ನಿತ್ಯವೂ ಕುಡಿದು ಬಂದು ತಾಯಿಯೊಂದಿಗೆ ಜಗಳ ಮಾಡುತ್ತಿದ್ದನು ಎನ್ನಲಾಗಿದೆ.
ರಾತ್ರಿ ಕುಡಿದು ಬಂದಿದ್ದ ಲೋಕೇಶ ತನ್ನ ತಾಯಿ ಜೊತೆಗೆ ಜಗಳವಾಡಿ ಹೆಂಚಿನಿಂದ ತಲೆಗೆ ಹೊಡೆದ ಪರಿಣಾಮ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಮಾಯಕೊಂಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


