ಕೋಟಾದಲ್ಲಿ ಎರಡು ದಿನಗಳ ಹಿಂದೆ ರೀಲ್ ಮಾಡುವಾಗ ಕಂಟ್ರಿಮೇಡ್ ಪಿಸ್ತೂಲ್ ನಿಂದ ಗುಂಡು ಹಾರಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದ.
ಸ್ನೇಹಿತನನ್ನು ಮಾರಣಾಂತಿಕವಾಗಿ ಶೂಟ್ ಮಾಡಿದ ಬಾಲಾಪರಾಧಿ ಸೇರಿದಂತೆ ಆರೋಪಿಯ ಸಹಚರರಾದ ಅಜಯ್ ಸಾಲ್ವಿ ಮತ್ತು ದೀಪಕ್ ಪ್ರಜಾಪತಿ ಅಲಿಯಾಸ್ ‘ಲಡ್ಡು ಶೂಟರ್’ ನನ್ನೂ ಬಂಧಿಸಲಾಗಿದೆ.
ಕೋಟಾ ಎಸ್ಪಿ ಅಮೃತಾ ದುಹಾನ್ ಮಾತನಾಡಿ ಮೇ 1 ರಂದು ಸಮುದಾಯ ಕೇಂದ್ರದ ಮುಂಭಾಗದ ಟೀ ಸ್ಟಾಲ್ ನಲ್ಲಿ ತನ್ನ ಮಗನನ್ನು ಅಜಯ್ ಸಾಲ್ವಿ, ದೀಪಕ್ ಪ್ರಜಾಪತಿ ಮತ್ತು ಇತರರು ಗುಂಡು ಹಾರಿಸಿ ಸಾಯಿಸಿದ್ದಾರೆಂದು ದೂರುದಾರರು ಆರೋಪಿಸಿರುವುದಾಗಿ ತಿಳಿಸಿದರು.
ಸುಳಿವಿನ ಮೇರೆಗೆ ಬಾಲಾಪರಾಧಿ ಸೇರಿದಂತೆ ಆತನ ಸಹಚರರನ್ನು ಬಂಧಿಸಿದ್ದು, ಕಂಟ್ರಿಮೇಡ್ ಪಿಸ್ತೂಲ್ ಮತ್ತು ಅಪರಾಧಕ್ಕೆ ಬಳಸಿದ ಖಾಲಿ ಕಾರ್ಟ್ರಿಡ್ಜ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


