ಚಿಕ್ಕಮಗಳೂರು: ಹುಲಿ ಉಗುರು ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬಳಿಕ ಸಾಲು ಸಾಲು ಜನರಿಗೆ ಕಂಟಕ ಶುರುವಾಗಿದೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹುಲಿ ಉಗುರು ಧರಿಸಿದ್ದ ಸಾಲು ಸಾಲು ಜನರ ಬಂಧನವಾಗ್ತಿದೆ. ಖಾಂಡ್ಯಾದ ಇತಿಹಾಸ ಪ್ರಸಿದ್ಧ ಮಾರ್ಕಂಡೇಯ ದೇವಸ್ಥಾನದ ಇಬ್ಬರು ಅರ್ಚಕರು ಬಂಧನವಾಗಿರುವ ಬೆನ್ನಲ್ಲೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು. ಈ ಪ್ರಕರಣದಲ್ಲಿ ಸ್ವತಃ ಅರಣ್ಯ ಇಲಾಖೆಯ ಅಧಿಕಾರಿಯೇ ಹುಲಿ ಉಗುರು ಪೆಂಡೆಂಟ್ ಧರಿಸಿರುವ ಫೋಟೊ ವೈರಲ್ ಆಗಿದೆ.
ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ಡಿ.ಆರ್.ಎಫ್.ಓ ದರ್ಶನ್ ಎನ್ನುವವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಹುಲಿ ಉಗುರಿನ ಹುರುಳಲ್ಲಿ ಸಿಲುಕಿದ್ದ ಕಳಸದ ಅರಣ್ಯ ಅಧಿಕಾರಿ ದರ್ಶನ್ ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ ಕೊಪ್ಪ ಡಿಎಫ್ ಓ ನಂದೀಶ್ ಆದೇಶ ಹೊಡಿಸಿದ್ದರು. ಅಮಾನತು ಮಾಡಿದ ಮೇಲೂ ವಿಚಾರಣೆಗೆ ಹಾಜರಾಗದ ದರ್ಶನ್‌ಅನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.


