ರೈಲು ಪ್ಲಾಟ್ ಫಾರ್ಮ್‌ಗೆ ಡಿಕ್ಕಿ ಹೊಡೆದಿದೆ. ಉತ್ತರ ಪ್ರದೇಶದ ಮಥುರಾ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ. ದೆಹಲಿಯಿಂದ ಬರುತ್ತಿದ್ದ ರೈಲು ಹಳಿತಪ್ಪಿ ಪ್ಲಾಟ್ ಫಾರ್ಮ್ ಮೇಲೆ ಹೋಯಿತು. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ರೈಲ್ವೆ ಇಲಾಖೆ ಆದೇಶಿಸಿದೆ.
ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಪ್ಲಾಟ್ ಫಾರ್ಮ್ ಗೆ ಡಿಕ್ಕಿ ಹೊಡೆದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ರೈಲು ನಿಂತಿತು. ರೈಲಿನ ಇಂಜಿನ್ ಢಿಕ್ಕಿಯಾಗಿ ಪ್ಲಾಟ್ ಫಾರ್ಮ್‌ನ ಒಂದು ಭಾಗ ಹಾಗೂ ಕಂಬ ಕುಸಿದು ಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಪಘಾತದ ಮೊದಲು ಟಿಟಿಇ ಸೇರಿದಂತೆ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ರೈಲಿನಿಂದ ಇಳಿದರು.


