ತುಮಕೂರು: ನಗರದ ಡಾ.ಗುಬ್ಬಿ ವೀರಣ್ಣಕಲಾ ಕ್ಷೇತ್ರದಲ್ಲಿ ನಾಟಕ ಮನೆ ತುಮಕೂರು ಹಮ್ಮಿಕೊಂಡ ಎರಡು ದಿನಗಳ ನಾಟಕೋತ್ಸವದ ಸಮಾರೋಪ ಸಮಾರಂಭ ಯಶಸ್ವಿಯಾಗಿ ಮೂಡಿಬಂದಿತು.
ನಟ, ನಿರ್ದೇಶಕರಾದ ಮಂಡ್ಯ ರಮೇಶ್ ರವರು ತುಮಕೂರಿನ ರಂಗಕರ್ಮಿಗಳು, ರಂಗಾಸಕ್ತ ಪ್ರೇಕ್ಷಕರ ಜೊತೆ ರಂಗಸಂವಾದವನ್ನು ನಡೆಸಿಕೊಟ್ಟರು.
ರಂಗಸಂವಾದದಲ್ಲಿ ಪ್ರಜಾಪ್ರಗತಿ ಪತ್ರಿಕೆಯ ಸಂಪಾದಕರಾದ ಎಸ್.ನಾಗಣ್ಣ, ಕಲಾಶ್ರೀ ಡಾ.ಲಕ್ಷ್ಮಣದಾಸ್, ರಂಗ ನಿರ್ದೇಶಕರಾದ ಎಸ್.ಎ.ಖಾನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಪ್ಪ, ನಿರ್ದೇಶಕರಾದ ನಟರಾಜ್ ಹೊನ್ನವಳ್ಳಿ, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರಾದ ಬಾ.ಹ.ರಮಾಕುಮಾರಿ, ಡಮರುಗ ರಂಗಸಂಸ್ಥೆಯ ಮೆಳೇಹಳ್ಳಿ ದೇವರಾಜು, ನಾಟಕ ಮನೆ ಮಹಾಲಿಂಗು ಮತ್ತುಇನ್ನೂ ಹಲವಾರು ರಂಗಕರ್ಮಿ ಗೆಳೆಯರು ಭಾಗವಹಿಸಿ ಪ್ರಸ್ತುತ ರಂಗಭೂಮಿಯ ಸ್ಥಿತಿ–ಗತಿಗಳ ಬಗ್ಗೆ ಚರ್ಚೆ ನಡೆಸಿದರು.
ವರ್ತಮಾನಕ್ಕೆರಂಗಭೂಮಿ ಹೇಗೆ ತೆರೆದುಕೊಳ್ಳಬೇಕು, ವರ್ತಮಾನದ ಸವಾಲುಗಳನ್ನು ಎದುರಿಸುವುದು ಹೇಗೆ ಮತ್ತು ರಂಗಭೂಮಿಯ ನಿರಂತರತೆಯನ್ನುಕಾಪಾಡಿಕೊಂಡು ಹೋಗುವುದು ಹೇಗೆ, ತುಮಕೂರಿನ ರಂಗಭೂಮಿಯ ಸವಾಲುಗಳು ಏನು, ಬಯಲುಸೀಮೆ ರಂಗಾಯಣದ ಅಗತ್ಯ, ಪ್ರಾಮುಖ್ಯತೆ ಎಂಬ ಹಲವಾರು ರಂಗವಿಷಯಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಸಿದರು. ನಂತರ ನಾಟಕಮನೆ ಮಹಾಲಿಂಗುರವರು ಮಂಡ್ಯ ರಮೇಶ್ ರವರಿಗೆ ರಂಗಗೌರವವನ್ನು ನೀಡಿದರು.
ನಟರಾಜ್ ಹೊನ್ನವಳ್ಳಿರವರು ಮಾತನಾಡಿ, ಬಯಲುಸೀಮೆ ರಂಗಾಯಣದ ಅಗತ್ಯ, ಅದರ ನಿರ್ವಹಣೆ ಮತ್ತು ಅದರ ವಿಸ್ತಾರತೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ನಂತರ ಕಾರ್ಯಕ್ರಮದ ಅಧ್ಯಕ್ಷರಾದಎಸ್.ನಾಗಣ್ಣ ಮಾತನಾಡಿ, ತುಮಕೂರಿನಲ್ಲಿ ರಂಗಭೂಮಿ ಅನುಭವಿಸುತ್ತಿರುವ ಹಿನ್ನಡೆಯ ಬಗ್ಗೆ ಮಾತನಾಡಿ, ಚೇತರಿಕೆಗೆ ಬೇಕಾದ ಅಂಶಗಳನ್ನು ಒತ್ತಿ ಹೇಳಿದರು.
ಕೊನೆಯಲ್ಲಿ ಮಂಡ್ಯರಮೇಶ್ ಮಾತನಾಡಿ ನಾಟಕ ಮನೆ ಮಹಾಲಿಂಗು ಜೊತೆಗಿನ 25 ವರ್ಷಗಳ ಗೆಳೆತನದ ಬಗ್ಗೆ ಮಾತನಾಡಿ, ರಂಗಗೌರವ ನೀಡಿದ್ದಕ್ಕೆ ನಾಟಕ ಮನೆ ತುಮಕೂರು ಮತ್ತುತುಮಕೂರಿನ ರಂಗಕರ್ಮಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
ವೇದಿಕೆಯಲ್ಲಿ ಎಸ್.ನಾಗಣ್ಣ, ಸಿದ್ದಲಿಗಂಪ್ಪ, ನಾಟಕಮನೆ ಮಹಾಲಿಂಗು, ಬಾ.ಹ.ರಮಾಕುಮಾರಿ, ಸಿ.ವಿ.ಮಹದೇವಯ್ಯ, ಡಾ.ಬಸವರಾಜು, ನಟರಾಜ್ ಹೊನ್ನವಳ್ಳಿ, ಮೆಳೇಹಳ್ಳಿ ದೇವರಾಜು, ಪ್ರಕಾಶ್ಎನ್.ಆರ್. ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4