ಬೆಂಗಳೂರಿನಲ್ಲಿ ನೆನ್ನೆ ಸಿಡಿಲು ಸಮೇತ ದೊಡ್ಡ ಮಳೆ ಬಿದ್ದಿದೆ. ಈ ಸಂದರ್ಭ ಸಿಡಿಲು ಬಡಿದು ಮಹಿಳೆ ಹಾಗೂ 20 ಕ್ಕೂ ಹೆಚ್ಚು ಮೇಕೆಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಆ ಗ್ರಾಮದ ರತ್ಮಮ್ಮ ಸಿಡಿಲಿಗೆ ಬಲಿಯಾದ ಮಹಿಳೆ.
ಬೆಂಗಳೂರು ಮತ್ತು ಸುತ್ತಮುತ್ತ ದಿಢೀರ್ ಮಳೆ ಶುರುವಾಗಿದ್ದು, ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದಲ್ಲಿ ಬೇವಿನ ಮರದಡಿ ಮೇಕೆಗಳ ಜೊತೆ ನಿಂತಿದ್ದಾಗ ಜೋರಾಗಿ ಸಿಡಿಲು ಬಡಿದಿದೆ. ಆಗ ರತ್ನಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ ಅಲ್ಲಿದ್ದ ಮೇಕೆಗಳು ಕೂಡ ಸಿಡಿಲಿಗೆ ಬಲಿಯಾಗಿವೆ. ಗ್ರಾಮದಲ್ಲಿ ಗಾಳಿ ಮಳೆಯ ಆರ್ಭಟ ಜೋರಾಗಿದ್ದು ಮಳೆ ಅಲ್ಲಲ್ಲಿ ಮುಂದುವರೆದಿದೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


