ಗಾಢನಿದ್ದೆಯಲ್ಲಿದ್ದ ಗೆಳೆಯನ ಗುಪ್ತಾಂಗವನ್ನೇ ಮಹಿಳೆಯೊಬ್ಬಳು ಕತ್ತರಿಸಿ ಎಸೆದಿರುವ ಘಟನೆ ಅಮೆರಿಕದ ಕೊಲೋರಡೋ ಪ್ರದೇಶದಲ್ಲಿ ವರದಿಯಾಗಿದೆ. ತನ್ನನ್ನು ನೆಮ್ಮದಿಯಿಂದ ಮಲಗುವುದಕ್ಕೆ ಬಿಡದಿದ್ದ ಕಾರಣ ಮತ್ತು ಆತ ಮತ್ತೆ ತನ್ನನ್ನು ಗರ್ಭಿಣಿಯನ್ನಾಗಿ ಮಾಡಿದ್ದಾನೆಂಬ ಕಾರಣಕ್ಕೆ ಕೋಪಗೊಂಡ ಮಹಿಳೆ ಬಾಯ್ ಫ್ರೆಂಡ್ ನ ಗುಪ್ತಾಂಗವನ್ನೇ ಕತ್ತರಿಸಿದ್ದಾಳೆ ಎಂದು ತನಿಖೆಯಿಂದ ಬಯಲಾಗಿದೆ.
ಹೊಟೇಲ್ ವೊಂದರಲ್ಲಿ ಈ ಘಟನೆ ನಡೆದಿದ್ದು, ಶೆಂಟಿಂಗ್ ಗೋ ಎಂಬ 32ವರ್ಷದ ಮಹಿಳೆ ತನ್ನ ಬಾಯ್ ಫ್ರೆಂಡ್ ಅನ್ನು ಹಲವು ಬಾರಿ ಚುಚ್ಚಿದ್ದಾಳೆ. ಬಳಿಕ ಅವನ ಗುಪ್ತಾಂಗವನ್ನು ಕಟ್ ಮಾಡಿ ಎಸೆದಿದ್ದಾಳೆ. ಈ ವಿಚಾರ ತಿಳಿದ ಹೊಟೇಲ್ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸ್ ಸ್ಥಳಕ್ಕೆ ಬಂದು ನೋಡಿದಾಗ ಯುವಕ ರಕ್ತದ ಮಡುವಿನಲ್ಲಿ ಬಿದ್ದಿದ್ದ.
ಆತನ ಗುಪ್ತಾಂಗವನ್ನು ಕತ್ತರಿಸಲಾಗಿತ್ತು. ಕತ್ತರಿಸಿಲಾಗಿದ್ದ ಗುಪ್ತಾಂಗ ಬೆಡ್ ಪಕ್ಕದಲ್ಲೇ ಇದ್ದ ಕಸದ ಬುಟ್ಟಿಯಲ್ಲಿ ಸಿಕ್ಕಿತ್ತು ಎನ್ನಲಾಗಿದೆ. ಕೊಲೆಯಾದ ವ್ಯಕ್ತಿ, ಶೆಂಟಿಂಗ್ ಗೋ ಇಚ್ಛೆಗೆ ವಿರುದ್ಧವಾಗಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಎರಡನೇ ಬಾರಿ ಗರ್ಭಿಣಿಯನ್ನಾಗಿ ಮಾಡಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಭಾರೀ ಗಲಾಟೆಯಾಗಿತ್ತು. ಆಕೆಯನ್ನು ಮಲಗಲೂ ಬಿಡದೇ ವ್ಯಕ್ತಿ ಬಹಳಷ್ಟು ಕಿರಿ ಕಿರಿ ಮಾಡುತ್ತಿದ್ದ. ಇದರಿಂದ ಕೋಪಕೊಂಡ ಶೆಂಟಿಂಗ್ ಗೋ ಚಾಕುವಿನಿಂದ ಆತನನ್ನು ಚುಚ್ಚಿದ್ದಾಳೆ. ಬಳಿಕ ಆತನ ಗುಪ್ತಾಂಗ ಕಿತ್ತು ಕಸದ ಬುಟ್ಟಿಗೆ ಹಾಕಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


