ಬೆಂಗಳೂರು: ಗಂಡ–ಹೆಂಡತಿ ಮನೆ ಟೆರೇಸ್ ಮೇಲಿದ್ದರು. ಈ ವೇಳೆ ಪತ್ನಿ ಜಾರಿ ಕೆಳಗೆ ಬೀಳುತ್ತಿದ್ದರು. ಆಗ ಗಂಡ ಆಕೆಯ ಕೈಹಿಡಿದು ರಕ್ಷಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಪತ್ನಿ ಗಂಡ ಕೈಯಿಂದ ನೇತಾಡುತ್ತಿದ್ದರೆ, ಕೆಳಗೆ ನಿಂತಿದ್ದ ಜನ ರಕ್ಷಣೆ ಮಾಡೋಕೆ ಸಿದ್ಧತೆ ಮಾಡ್ತಿದ್ದರು.. ಆದ್ರೆ, ಆಕೆ ಗಂಡನ ಕೈಜಾರಿ ಕೆಳಗೆ ಬಿದ್ದಿದ್ದಾಳೆ. ಕೆಳಗೆ ಬೈಕ್‌ಗಳು ಪಾರ್ಕ್ ಮಾಡಿದ್ದರಿಂದ ಅದರ ಮೇಲೆ ಬಿದ್ದು ತೀವ್ರ ಗಾಯಗೊಂಡಿದ್ದಾಳೆ.. ಕೋಮಾಗೆ ಜಾರಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ನಡೆದದ್ದು ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಕನಕನಗರದ ಬಡಾವಣೆಯಲ್ಲಿ. 27 ವರ್ಷದ ಮಹಿಳೆ ರುಬಾಯ್ ಎಂಬಾಕೆಯೇ ಮನೆ ಮೇಲಿಂದ ಕಾಲುಜಾರಿ ಬಿದ್ದಾಕೆ.
ಸದ್ಯ ಆಕೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ಪತಿಯ ಜೊತೆ ಕಟ್ಟಡದ ಮೇಲೆ ಆಕೆ ಕೆಲಸ ಮಾಡ್ತಿದ್ದಳು. ಕೆಲಸ ಮಾಡುವ ವೇಳೆ ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾಳೆ.. ನೀರಿನ ಮೇಲೆ ಕಾಲಿಟ್ಟಿದ್ದರಿಂದ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆ ಎಂದು ತಿಳಿದುಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


