ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಯುವ ವೈದ್ಯರೊಬ್ಬರ ಮೃತದೇಹ ಪತ್ತೆಯಾಗಿದೆ. ವೈದ್ಯೆ ಅಭಿರಾಮಿ ಮೃತಪಟ್ಟಿದ್ದಾರೆ. ವೈದ್ಯೆ ಅಭಿರಾಮಿ ತಿರುವನಂತಪುರದ ವೆಲ್ಲನಾಡು ಮೂಲದವರು. ಮೆಡಿಕಲ್ ಕಾಲೇಜು ಸಮೀಪದ ಪಿಟಿ ಚಾಕೋ ನಗರದ ಫ್ಲ್ಯಾಟ್ ನಲ್ಲಿ ಮೃತದೇಹ ಪತ್ತೆಯಾಗಿದೆ. ಅರಿವಳಿಕೆ ಔಷಧಿಯ ಮಿತಿಮೀರಿದ ಸೇವನೆಯೇ ಸಾವಿಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಪೊಲೀಸರ ಪ್ರಕಾರ ಇವರು ಮಧ್ಯಾಹ್ನದ ಊಟದ ನಂತರ ತನ್ನ ಮನೆ ಲಾಕ್ ಮಾಡಿದ್ದರು. ಈಕೆಯ ಫ್ಲ್ಯಾಟ್ ಮೇಟ್ಸ್ ಬಲವಂತದಿಂದ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಅಲ್ಲಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ತನ್ನ ಬೆಡ್ ಮೇಲೆ ಬಿದ್ದಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಅಲ್ಲಿ ವೈದ್ಯರು ಆಕೆಯನ್ನು ಮೃತ ಎಂದು ಘೋಷಣೆ ಮಾಡಿದ್ದಾರೆ.
ಪೊಲೀಸರು ಕೊಠಡಿಯಿಂದ ಸಿರಿಂಜ್ ಮತ್ತು ಡೆತ್ ನೋಟ್ ವಶಪಡಿಸಿಕೊಂಡಿದ್ದಾರೆ. ಮೃತದೇಹವನ್ನು ವೈದ್ಯಕೀಯ ಕಾಲೇಜು ಶವಾಗಾರಕ್ಕೆ ಸಾಗಿಸಲಾಗಿದೆ. ಮಿತಿಮೀರಿದ ಮಾದಕ ದ್ರವ್ಯ ಸೇವನೆಯಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಯುವ ವೈದ್ಯೆ ಕೊಲ್ಲಂನ ರಾಮನ್ ಕುಲಂಗರ ನಿವಾಸಿ ಪ್ರತೀಶ್ ರಘು ಅವರನ್ನು ವಿವಾಹವಾಗಿದ್ದರು. ಅವರು ಕೂಡಾ ವೃತ್ತಿಯಲ್ಲಿ ವೈದ್ಯರು. ಪೊಲೀಸರು ಅಸ್ವಾಭಾವಿಕ ಮರಣಕ್ಕಾಗಿ ಸಿಆರ್ ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296