ತುಮಕೂರು: ಮಾರಕಾಸ್ತ್ರಗಳಿಂದ ಯುವಕನ ಕೊಲೆ ನಡೆದಿರೋ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದ ಹೊರವಲಯದಲ್ಲಿ ನಡೆದಿದೆ.
ತಿಪಟೂರು ತಾಲ್ಲೂಕಿನ ಈಡೇನಹಳ್ಳಿ ಪಾಳ್ಯ ನಿವಾಸಿ ಎನ್.ಚೇತನ್ (35) ಎಂಬ ಯುವಕ ಕೊಲೆಯಾದ ದುರ್ದೈವಿ ಆಗಿದ್ದಾನೆ.
ತಿಪಟೂರು ನಗರದ ಹಾಲ್ಕುರಿಕೆ ರಸ್ತೆ ಧನಲಕ್ಷ್ಮಿ ಕೋಕೋ ನೆಟ್ ಫ್ಯಾಕ್ಟರಿ ಬಳಿ ಚೇತನ್ ನ ಮೃತದೇಹ ಪತ್ತೆಯಾಗಿದೆ.
ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ, ಗ್ರಾಮಾಂತರ ವೃತ್ತನಿರೀಕ್ಷಕ ಸಿದ್ದರಾಮೇಶ್ವರ್,ಹೊನ್ನವಳ್ಳಿ ಸಬ್ ಇನ್ಪೆಕ್ಟರ್ ರಾಜೇಶ್. ಹಾಗೂ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಶವವನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ.
ಹಿನ್ನೆಲೆ :
ಪೊಲೀಸ್ ಮಾಹಿತಿ ಪ್ರಕಾರ ತಿಪಟೂರು ಈಡೇನಹಳ್ಳಿ ಪಾಳ್ಯ ನಿವಾಸಿ ಚೇತನ್, ತಿಪಟೂರು ನಗರದ ಗುಬ್ಬಿ ಲೇಔಟ್ ವಾಸಿಸುತ್ತಿದ್ದನು. ಚೇತನ್ ಈ ಹಿಂದೆ ಶಿವಮೊಗ್ಗ ಮೂಲದ ನಂದಿನಿ ಎಂಬ ಮಹಿಳೆಯೊಂದಿಗೆ ಮದುವೆಯಾಗಿದ್ದು, ಕೌಟುಂಬಿ ಕಲಹದಿಂದ ಬೇರ್ಪಟಿದ್ದರು.
ಸ್ವಂತ ಲಾರಿ ಹೊಂದಿದ್ದ ಚೇತನ್ ತಿಪಟೂರಿನ ಕಾಯಿ ಪ್ಯಾಕ್ಟರಿಗಳಿಂದ ಕಾಯಿ ಟ್ರಾನ್ಸ್ ಪೋರ್ಟ್ ಮಾಡುತ್ತಿದ್ದ, ಆಲೂರು ಗ್ರಾಮದ ಯುವತಿ ಲವ್ ಮಾಡುತ್ತಿದ್ದಳು. ಪರಸ್ಪರ ಪ್ರೀತಿಸುತ್ತಿದ ಇಬ್ಬರೂ ಮದುವೆಯಾಗಲು ನಿರ್ದರಿಸಿದ್ದರು ಎನ್ನಲಾಗಿದೆ.
ನಿನ್ನೆ ಪಾನಮತ್ತನಾದ ಚೇತನ್, ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ರಸ್ತೆ ಧನಲಕ್ಷ್ಮಿ ಕಾಯಿ ಪ್ಯಾಕ್ಟರಿ ಬಳಿ ಇರುವ ಯುವತಿಯ ಅಪ್ಪ ಲೋಕೇಶಪ್ಪ ನವರ ಬಳಿ ಹೋಗಿ ನಿಮ್ಮ ಮಗಳನುಕೊಡಿ ಮದುವೆಯಾಗುತ್ತೇನೆ ,ಎಂದು ಗಲಾಟೆ ಮಾಡಿದ್ದಾನೆ.
ಗಲಾಟೆ ವೇಳೆ ನಿನಗೆ ಮಗಳನು ಕೊಡುವುದಿಲ್ಲ ಎಂದಾಗಿ ಚೇತನ್ ಹಾಗೂ ಲೋಕೇಶಪ್ಪ ಹಾಗೂ ಆತನ ಹೆಂಡತಿ ಕಲಾವತಿ ಮಧ್ಯೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q