ಉತ್ತರ ಕರ್ನಾಟಕದ ಹುಬ್ಬಳ್ಳಿಯ ಸಂಜನಾ ಹಿರೇಮಠ(23) ಒಂದು ದಿನದ ಮಟ್ಟಿಗೆ ಬೆಂಗಳೂರಿನಲ್ಲಿ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಆಗುವ ಮೂಲಕ ರಾಜತಾಂತ್ರಿಕರ ಕಾರ್ಯವೈಖರಿಯನ್ನು ಕಂಡುಕೊಂಡರು. ಅಲ್ಲದೇ, ಯುಕೆ-ಭಾರತದ ಪಾಲುದಾರಿಕೆಯನ್ನು ಕಾರ್ಯರೂಪಕ್ಕೆ ತರಲು ಬಯಸಿದರು.
ಭಾರತದಲ್ಲಿನ ಬ್ರಿಟಿಷ್ ಹೈಕಮಿಷನ್ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನವನ್ನು ಆಚರಿಸಲು (ಅಕ್ಟೋಬರ್ 11) 2017 ರಿಂದ ಪ್ರತಿ ವರ್ಷ ‘ಹೈ ಕಮಿಷನರ್ ಫಾರ್ ಎ ಡೇ’ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ.


