ತುಮಕೂರು: ತುಮಕೂರು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಟ್ರಾಮಾ ಕೇರ್ ಸೆಂಟರ್ ಗೆ ಅರೆ ವೈದ್ಯಕೀಯ ಸಿಬ್ಬಂದಿ ಹುದ್ದೆಗೆ ನೇರ ನೇಮಕಾತಿ ಪ್ರಕ್ರಿಯೆ . ದಿಢೀರ್ ಸ್ಥಗಿತಗೊಂಡು ಮುಂದೂಡಿಕೆ ಮಾಡಿರುವುದರಿಂದ ಆಕಾಂಕ್ಷಿಗಳು ಬೇಸರಗೊಂಡು ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಸುಮಾರು 68 ವಿವಿಧ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಜಿಲ್ಲಾಡಳಿತದ ವತಿಯಿಂದ ಆಹ್ವಾನ ನೀಡಲಾಗಿತ್ತು. ಆದರೆ ನಿನ್ನೆ ಸಂಜೆ ನೇರ ಸಂದರ್ಶನ ಮುಂದೂಡಿ ಸೂಚನಾ ಪತ್ರ ಜಿಲ್ಲಾಸ್ಪತ್ರೆ ಅಧಿಕಾರಿಗಳು ಹೊರಡಿಸಿದ್ದರು.
ಸೂಚನಾ ಪತ್ರ ತಲುಪುವ ಮೊದಲೇ ನೇರ ಸಂದರ್ಶನಕ್ಕೆ ಹಾಜರಿದ್ದ ಅಭ್ಯರ್ಥಿಗಳು, ನಮಗೆ ರದ್ದಾಗಿರುವ ವಿಚಾರ ಗೊತ್ತಿಲ್ಲ ಸಂದರ್ಶನ ಮಾಡಿ ಎಂದು ಪಟ್ಟು ಇಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಉಳಿದವರಿಗೆ ಅನ್ಯಾಯವಾಗಲಿದೆ ನಾವು ಸೂಚನಾ ಪತ್ರ ಹೊರಡಿಸಿದ್ದೇವೆ ಎಂದ ಇಲಾಖಾ ಸಿಬ್ಬಂದಿ ಸ್ಪಷ್ಟನೆ ಕೊಡುತ್ತಿದ್ದಾರೆ. ಕಳೆದ ಅರ್ಧ ಗಂಟೆಯಿಂದ ಆಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.


