ತುಮಕೂರು: ಎರಡು ಕಾರುಗಳ ನಡುವೆ ಭೀಕರ ಅಪಘಾತದಲ್ಲಿ ಒಟ್ಟು ಐವರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಹಾಗೂ ಕಾಟಗಾನಹಟ್ಟಿ ಬಳಿ ನಡೆದಿದೆ.
ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಮೃತಪಟ್ಟಿದ್ದು ಸಿಂಧೂ ಎಂಬ ಮಹಿಳೆಯೊಬ್ಬರನ್ನು ಗುರುತಿಸಲಾಗಿದೆ. ಇನ್ನುಳಿದವರ ಹೆಸರು ಪತ್ತೆಯಾಗಿಲ್ಲ.
ಮಹಿಳೆ ಮತ್ತು ಬಾಲಕನ ಸ್ಥಿತಿ ಗಂಭೀರವಾಗಿದೆ. ಒಂದು ಕಾರಿನಲ್ಲಿದ್ದ ಮೂವರು ಮತ್ತೊಂದು ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಮಾರುತಿ ಕಾರು ತುಮಕೂರು ಕಡೆಯಿಂದ ಬರುತ್ತಿತ್ತು, ಟಾಟಾ ಟಿಯಾಗೋ ಮಧುಗಿರಿ ಕಡೆಯಿಂದ ತುಮಕೂರು ಕಡೆ ಹೋಗುತ್ತಿದ್ದ ವೇಳೆ ಈ ಭೀಕರ ಅಪಘಾತ ನಡೆದಿದೆ.
ಸ್ಥಳಕ್ಕೆ ಮಧುಗಿರಿ ಪಿಎಸ್ ಐ ವಿಜಯ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಯೋಗೇಶ್ ಪುತ್ರ ಸಿಂಧೂ (12), ಸೇರಿ ಒಂದೇ ಕುಟುಂಬದ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ.
ಸಿಯಾಜ್ ಕಾರಿನಲ್ಲಿ ತೆರಳುತ್ತಿದ್ದ ಮೃತ ಯೋಗೇಶ್ ಕುಟುಂಬ, ಊರಿನಲ್ಲಿ ಹಬ್ಬ ಮುಗಿಸಿಕೊಂಡು ವೈ.ಎನ್. ಹೊಸಕೋಟೆ ಕಡೆಯಿಂದ ಬೆಂಗಳೂರಿಗೆ ಹೊಗುತ್ತಿತ್ತು. ಯೋಗೇಶ್ ಕುಟುಂಬ ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಾಗಿದ್ದರು.
ಟಿಯಾಗೋ ಕಾರಿನಲ್ಲಿದ್ದ ನಾಗರಾಜ್ ಮೃತಪಟ್ಟಿದ್ದಾರೆ. ಮೃತ ನಾಗರಾಜ್ ಕೊರಟಗೆರೆ ಕಡೆಯಿಂದ ಮಧುಗಿರಿ ಕಡೆ ತೆರಳುತ್ತಿದ್ದರು. ಈ ವೇಳೆ ಮಧುಗಿರಿ ತಾಲೂಕಿನ ಕಾಟಗಾನಹಟ್ಟಿ ಹಾಗೂ ಕೆರೆಗಳಪಾಳ್ಯ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಕಾರು ಡಿಕ್ಕಿಯಾದ ರಭಸಕ್ಕೆ ಎರಡು ಕಾರುಗಳೂ ಸಂಪೂರ್ಣ ಜಖಂಗೊಂಡಿವೆ. ಟಿಯಾಗೋ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನ ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ತುಮಕೂರು ಎಸ್ ಪಿ ಅಶೋಕ್ ಕೆ.ವಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q