ಬೀದರ್: ಜಿಲ್ಲೆಯ ಐದು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ದರೋಡೆ, ಮನೆ ಕಳ್ಳತನ, ಅಕ್ರಮ ಗಾಂಜಾ ಪ್ರಕರಣಗಳನ್ನು ಕಳೆದ 10 ದಿನಗಳಲ್ಲಿ ಪತ್ತೆ ಪೊಲೀಸರು ಪತ್ತೆ ಮಾಡಿದ್ದು, 94 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಹುಮನಾಬಾದ ಡಿ.ಎಸ್ಪಿ ನ್ಯಾಮೆಗೌಡ, ಶಿವನಗೌಡ ಪಾಟೀಲ್, ಶಿವಾನಂದ ಪವಾಡಶೆಟ್ಟಿ ರವರ ನೇತೃತ್ವದಲ್ಲಿ ತಮ್ಮ ತಮ್ಮ ಉಪ-ಭಾಗದ ವೃತ್ತ ನಿರೀಕ್ಷಕರಾದ ಮಹೇಶ ಗೌಡ ಪಾಟೀಲ್, ಫುಲಯ್ಯಾ ರಾಠೋಡ್, ರಘುವೀರಸಿಂಗ್ ಠಾಕೂರ್, ಹನುಮರೆಡ್ಡೆಪ್ಪಾ ಪಿ.ಐ ರವರ ತಂಡವನ್ನು ಈ ಕಾರ್ಯಾಚರಣೆ ನಡೆಸಿದೆ.
ಬೇಮಳಖೇಡಾ ಠಾಣೆಯ ದರೋಡೆ ಪ್ರಕರಣದಲ್ಲಿ ಕೇವಲ 48 ಗಂಟೆಗಳಲ್ಲಿ ಕಳುವಾದ 694 ಜಿ.ಎಮ್ ಕಂಪನಿಯ ಫ್ಯಾನ ಬಾಕ್ಸ್, ಒಂದು ಕಂಟೆನರ್ ಅಃಕಿಃ 50,76,156=00 ರೂಪಾಯ ಮೌಲ್ಯದವುಗಳನ್ನು ವಶಪಡಿಸಿಕೊಳ್ಳಲಾಯಿತು.
ಬೀದರ ನಗರ ಠಾಣೆಯ ದರೋಡೆ, ಕೊಲೆ ಯತ್ನ, ಆಮ್ಸ್ ಪ್ರಕರಣದಲ್ಲಿ ನಗದು ಹಣ, ಒಂದು ಕಾರ್, ಮೊಬೈಲ್, (ಮಹಾರಾಷ್ಟ್ರ ಪೊಲೀಸರು ವಶ ಪಡಿಸಿಕೊಂಡ ನಾಡ ಪಿಸ್ತೂಲ್, 2 ಜೀವಂತ ಗುಂಡುಗಳು) ಅ:ಕಿ 5,00,000 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.
ಗಾಂಧಿಗಂಜ ಪೊಲೀಸ್ ಠಾಣೆ ಮತ್ತು ಮಾರ್ಕೇಟ್ ಪೊಲೀಸ್ ಠಾಣೆಯ ಮನೆ ಕಳ್ಳತನ ಪ್ರಕರಣಗಳಲ್ಲಿ 180 gm ಬಂಗಾರದ ಆಭರಣ, 2 kg ಬೆಳ್ಳಿಯ ಆಭರಣ, ನಗದು ಹೀಗೆ ಒಟ್ಟು ಅಃಕಿಃ 12,82,000 ರೂಪಾಯಿ ಮೌಲ್ಯದವುಗಳನ್ನು ವಶಪಡಿಸಿಕೊಳ್ಳಲಾಯಿತು.
ಸಂತಪೂರ ಠಾಣೆಯ ಬಾರ್ಡರ ತಾಂಡಾದಲ್ಲಿ 179 (63.86 kg) ಹಸಿ ಗಾಂಜಾದ ಗಿಡ ಅಃಕಿಃ 25,54,400=00 ರೂಪಾಯಿ ಮೌಲ್ಯದ ಗಾಂಜಾ ಹೀಗೆ ಒಟ್ಟು 5 ಠಾಣೆಯಲ್ಲಿ ಒಟ್ಟು ಅಃಕಿಃ 94,12,556=00 ಮೌಲ್ಯದವುಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಹಲವು ಪ್ರಕರಣದ ಪತ್ತೆ ಹಚ್ಚುವಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಿ, ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಲಾಗಿದೆ. ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್


