ದಾವಣಗೆರೆ: ನಗರದ ಉಪಕಾರಾಗೃಹ ಗೋಡೆ ಮೇಲಿಂದ ಜಿಗಿದು ಅತ್ಯಾಚಾರ ಪ್ರಕರಣದ ಆರೋಪಿ ಜೈಲಿನಿಂದ ಪರಾರಿಯಾಗಿದ್ದಾನೆ. ಪರಾರಿ ಆಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಸಂತ್ (23) ಪರಾರಿಯಾದ ಆರೋಪಿ.
ಕಾಲಿಗೆ ಪೆಟ್ಟಾದರು ಎಲ್ಲಿಯೂ ಕೂರದೆ, ಕುಂಟುತ್ತಲೇ ಓಡಿ ಹೋಗಿ ಆಟೋ ಹತ್ತಿ ಎಸ್ಕೇಪ್ ಆಗಿದ್ದಾನೆ. ನಗರದ ಹೊರವಲಯದ ಕರೂರು ನಿವಾಸಿಯಾಗಿದ್ದಾನೆ. ಈತ ಆಟೋ ಚಾಲಕನಾಗಿದ್ದು, ಈತನ ವಿರುದ್ಧ ಎರಡು ದಿನಗಳ ಹಿಂದೆ ದಾವಣಗೆರೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.


