ಆಸ್ತಿಯ ಮಾಲಕತ್ವದಲ್ಲಿ ಬದಲಾವಣೆ ವಿಷಯದಲ್ಲಿ ಅವ್ಯಹಾರ ನಡೆಸಿದ ಆರೋಪದಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ವ್ಯವಸ್ಥಾಪಕ ಅಧಿಕಾರಿಯನ್ನು ಇಂದು ಅಮಾನತು ಗೊಳಿಸಿ ಕಲಬುರಗಿ ಪಾಲಿಕೆ ಆಯುಕ್ತರು ಆದೇಶ ಹೋರಡಿಸಿದ್ದಾರೆ.
ವಿನೋದ ಕುಮಾರ ವ೦ಟಿ ಪಾಲಿಕೆಯ ವ್ಯವಸ್ಥಾಪಕರಾಗಿದ್ದ. 1966ರ ನಿಯಮ 3(i) (ii) (iii) ನ್ನು ಉಲ್ಲಂಘಿಸಿರುವುದರಿಂದ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1957ರ ಪ್ರಕಾರ ಶಿಸ್ತಿನ ಕ್ರಮಕ್ಕೆ ಗುರಿಯಾಗಿದ್ದಾರೆ. ಇವರನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ.


