nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪ್ರತಿಭಾ ಕಾರಂಜಿಯಲ್ಲಿ ನೊಣವಿನಕೆರೆ ಪಿಎಂಶ್ರೀ ಕೆಪಿಎಸ್ ಮಕ್ಕಳ ಸಾಧನೆ | 27 ಸ್ಪರ್ಧೆಗಳಲ್ಲಿ 21 ಬಹುಮಾನ: ತಾಲ್ಲೂಕು ಮಟ್ಟಕ್ಕೆ ವಿದ್ಯಾರ್ಥಿಗಳ ಆಯ್ಕೆ

    November 19, 2026

    ರಂಜಾನ್ ಹಾಗೂ ವಿದ್ಯಾರ್ಥಿಗಳ ಪರೀಕ್ಷೆ ಹಿನ್ನೆಲೆಯಲ್ಲಿ ದಿನಾಂಕ ಬದಲಾವಣೆ : ಶಾಸಕ ಸಿ.ಬಿ.ಸುರೇಶ್‌ ಬಾಬು

    November 19, 2026

    ಹೊಳವನಹಳ್ಳಿಯಲ್ಲಿ ನಿವೇಶನ ಹಕ್ಕುಪತ್ರ ವಿತರಣೆ ಸಭೆ ದಿಢೀರ್ ರದ್ದು! | ಕೊನೆ ಕ್ಷಣದಲ್ಲಿ ಸಭೆ ಮುಂದೂಡಿಕೆ; ನೂರಾರು ಫಲಾನುಭವಿಗಳಿಗೆ ನಿರಾಸೆ

    November 19, 2026
    Facebook Twitter Instagram
    ಟ್ರೆಂಡಿಂಗ್
    • ಪ್ರತಿಭಾ ಕಾರಂಜಿಯಲ್ಲಿ ನೊಣವಿನಕೆರೆ ಪಿಎಂಶ್ರೀ ಕೆಪಿಎಸ್ ಮಕ್ಕಳ ಸಾಧನೆ | 27 ಸ್ಪರ್ಧೆಗಳಲ್ಲಿ 21 ಬಹುಮಾನ: ತಾಲ್ಲೂಕು ಮಟ್ಟಕ್ಕೆ ವಿದ್ಯಾರ್ಥಿಗಳ ಆಯ್ಕೆ
    • ರಂಜಾನ್ ಹಾಗೂ ವಿದ್ಯಾರ್ಥಿಗಳ ಪರೀಕ್ಷೆ ಹಿನ್ನೆಲೆಯಲ್ಲಿ ದಿನಾಂಕ ಬದಲಾವಣೆ : ಶಾಸಕ ಸಿ.ಬಿ.ಸುರೇಶ್‌ ಬಾಬು
    • ಹೊಳವನಹಳ್ಳಿಯಲ್ಲಿ ನಿವೇಶನ ಹಕ್ಕುಪತ್ರ ವಿತರಣೆ ಸಭೆ ದಿಢೀರ್ ರದ್ದು! | ಕೊನೆ ಕ್ಷಣದಲ್ಲಿ ಸಭೆ ಮುಂದೂಡಿಕೆ; ನೂರಾರು ಫಲಾನುಭವಿಗಳಿಗೆ ನಿರಾಸೆ
    • ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಪವನ್ ಕುಮಾರ್ ರೆಡ್ಡಿ
    • ಶೆಟ್ಟಿಕೆರೆಯಲ್ಲಿ ₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ರೈತ ಸಂಪರ್ಕ ಕೇಂದ್ರನಿರ್ಮಾಣ | ರೈತರ ಬಹುದಿನಗಳ ಬೇಡಿಕೆ ಈಡೇರಿಕೆ: ಶಾಸಕ ಸಿ.ಬಿ. ಸುರೇಶ್‌ ಬಾಬು
    • ಕ್ಲಸ್ಟರ್ ಕಿಚನ್ ವ್ಯವಸ್ಥೆ ಕೈಬಿಡಿ; ಅಡುಗೆ ನೌಕರರ ಉದ್ಯೋಗ ಕಸಿಯಬೇಡಿ–ಬಿಸಿಯೂಟ ನೌಕರರ ಸಂಘದ ಆಗ್ರಹ
    • ಗಣಿಬಾಧಿತ ಪ್ರದೇಶ ಅಭಿವೃದ್ಧಿ ಯೋಜನೆ : ಬಾಕಿ ಡಿಪಿಆರ್ ‌ಗಳನ್ನು ತ್ವರಿತವಾಗಿ ಸಲ್ಲಿಸಿ, ರೇಷ್ಮೆ ಇಲಾಖೆಯಿಂದ ವರದಿ ಸಲ್ಲಿಕೆಯಾಗಿಲ್ಲ : ಡಾ. ಸಂಜಯ್ ಎಸ್. ಬಿಜ್ಜೂರ ಅಸಮಾಧಾನ
    • ಕ್ರಿಪ್ಟೋ, ಚಿನ್ನ, ಈಕ್ವಿಟಿ SIP: ನಿಮ್ಮ ಹಣಕ್ಕೆ ಯಾವ ಹೂಡಿಕೆ ಸೂಕ್ತ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪ್ರತಿಭಾ ಕಾರಂಜಿಯಲ್ಲಿ ನೊಣವಿನಕೆರೆ ಪಿಎಂಶ್ರೀ ಕೆಪಿಎಸ್ ಮಕ್ಕಳ ಸಾಧನೆ | 27 ಸ್ಪರ್ಧೆಗಳಲ್ಲಿ 21 ಬಹುಮಾನ: ತಾಲ್ಲೂಕು ಮಟ್ಟಕ್ಕೆ ವಿದ್ಯಾರ್ಥಿಗಳ ಆಯ್ಕೆ
    ತಿಪಟೂರು November 19, 2026

    ಪ್ರತಿಭಾ ಕಾರಂಜಿಯಲ್ಲಿ ನೊಣವಿನಕೆರೆ ಪಿಎಂಶ್ರೀ ಕೆಪಿಎಸ್ ಮಕ್ಕಳ ಸಾಧನೆ | 27 ಸ್ಪರ್ಧೆಗಳಲ್ಲಿ 21 ಬಹುಮಾನ: ತಾಲ್ಲೂಕು ಮಟ್ಟಕ್ಕೆ ವಿದ್ಯಾರ್ಥಿಗಳ ಆಯ್ಕೆ

    By Ganesh TumkuruNovember 19, 2026No Comments2 Mins Read
    nonavinakere

    ತಿಪಟೂರು: ತಾಲೂಕಿನ ನೊಣವಿನಕೆರೆಯಲ್ಲಿ ನ.17 ಮತ್ತು 18ರಂದು ನಡೆದ 2026–27ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ನೊಣವಿನಕೆರೆ ಪಿಎಂಶ್ರೀ ಕೆಪಿಎಸ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ವಿವಿಧ ವಿಭಾಗಗಳ ಒಟ್ಟು 27 ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು 21 ಸ್ಪರ್ಧೆಗಳಲ್ಲಿ ಬಹುಮಾನ ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಶಾಲೆಯ ಪದವೀಧರ ಮುಖ್ಯೋಪಾಧ್ಯಾಯ ಸುರೇಶ್ ಎಸ್.ಆರ್. ತಿಳಿಸಿದ್ದಾರೆ.

    ಛದ್ಮವೇಷ ಸ್ಪರ್ಧೆಯಲ್ಲಿ ನಾಲ್ಕನೇ ತರಗತಿಯ ಭೂಮಿಕಾ ನ್ಯಾಯದೇವತೆಯ ವೇಷ ಧರಿಸಿ ಎಲ್ಲರ ಗಮನ ಸೆಳೆದು ಪ್ರಥಮ ಸ್ಥಾನ ಗಳಿಸಿದ್ದು ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರಕಲಾ ಸ್ಪರ್ಧೆಯಲ್ಲಿ ಏಳನೇ ತರಗತಿಯ ಶಿವಪ್ರಸಾದ್ ಕೆ.ಎಂ. ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾನೆ. ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಏಳನೇ ತರಗತಿಯ ಗೋಕುಲ್ ಗೌಡ ರಚಿಸಿದ ಯಕ್ಷಗಾನದ ಮಾದರಿ ಆಕರ್ಷಣೀಯ ಎಂದರು.

    ಭೂಮಿಕಾಳಿಗೆ ಛದ್ಮವೇಷ ಸ್ಪರ್ಧೆಯಲ್ಲಿ ಮಾರ್ಗದರ್ಶನ ನೀಡುವಲ್ಲಿ ಚಿತ್ರಕಲಾ ಶಿಕ್ಷಕರಾದ ಹುಚ್ಚಯ್ಯ ಕೆ.ಎಲ್. ಮತ್ತು ರಂಗರಾಜು ವಿಶೇಷ ಪರಿಶ್ರಮ ವಹಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ ಮಾರ್ಗದರ್ಶನ, ಪ್ರೋತ್ಸಾಹ ಹಾಗೂ ಮಕ್ಕಳ ನಿರಂತರ ಪರಿಶ್ರಮ ಕಾರಣವಾಗಿದೆ ಎಂದು ಹೇಳಿದರು.

    ಈ ಕುರಿತು ಮಾತನಾಡಿದ ಸುರೇಶ್ ಎಸ್.ಆರ್., ಪ್ರತಿಭಾ ಕಾರಂಜಿಯಲ್ಲಿ ನಮ್ಮ ಶಾಲೆಯ ಮಕ್ಕಳು 27 ಸ್ಪರ್ಧೆಗಳಲ್ಲಿ ಭಾಗವಹಿಸಿ 21ರಲ್ಲಿ ಬಹುಮಾನ ಗಳಿಸಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಕಾರಣರಾದ ಎಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಕ್ಕಳನ್ನು ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧಗೊಳಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಪದವೀಧರ ಪ್ರಾಥಮಿಕ ಶಿಕ್ಷಕ ರಮೇಶ್ ಮಾತನಾಡಿ, ಮಕ್ಕಳ ಪರಿಶ್ರಮದ ಜತೆಗೆ ಶಿಕ್ಷಕರ ಮಾರ್ಗದರ್ಶನವೂ ಈ ಸಾಧನೆಗೆ ಕಾರಣವಾಗಿದೆ. ಭೂಮಿಕಾ ನ್ಯಾಯದೇವತೆಯ ವೇಷದಲ್ಲಿ, ಶಿವಪ್ರಸಾದ್ ಪರಿಸರ ಸಂರಕ್ಷಣೆಯ ಚಿತ್ರದಲ್ಲಿ ಹಾಗೂ ಗೋಕುಲ್ ಗೌಡ ಯಕ್ಷಗಾನದ ಕ್ಲೇ ಮಾದರಿಯಲ್ಲಿ ವಿಶೇಷ ಪ್ರತಿಭೆ ಪ್ರದರ್ಶಿಸಿದ್ದಾರೆ. ಉಳಿದ ಸ್ಪರ್ಧೆಗಳಲ್ಲಿಯೂ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ಮುಂದಿನ ತಾಲ್ಲೂಕು ಮಟ್ಟದ ಸ್ಪರ್ಧೆಗಳಲ್ಲಿಯೂ ಹೆಚ್ಚಿನ ಯಶಸ್ಸು ಗಳಿಸುವಂತೆ ಶುಭ ಹಾರೈಸಿದ್ದಾರೆ.

    1ರಿಂದ 4ನೇ ತರಗತಿಯ ಕಿರಿಯ ವಿಭಾಗ:

    12 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಏಳು ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶ್ರಾವ್ಯ ಎಚ್.ಸಿ. (ಇಂಗ್ಲಿಷ್ ಕಂಠಪಾಠ), ಪೂರ್ವಿಕ (ಸಂಸ್ಕೃತ ಧಾರ್ಮಿಕ ಪಠಣ), ಆಯಿಷಾ ಸಿದ್ಧಿಖ (ಅರೇಬಿಕ್ ಧಾರ್ಮಿಕ ಪಠಣ), ಭೂಮಿಕಾ ಎಚ್.ಸಿ. (ಛದ್ಮವೇಷ), ಲೇಖನ ಎಚ್. (ಕಥೆ ಹೇಳುವುದು), ಗುಣಶ್ರೀ (ಭಕ್ತಿ ಗೀತೆ) ಹಾಗೂ ಸುಮಂತ್ ಎನ್.ಎಸ್. (ಆಶುಭಾಷಣ) ಪ್ರಥಮ ಬಹುಮಾನ ಪಡೆದಿದ್ದಾರೆ.

    5ರಿಂದ 7ನೇ ತರಗತಿಯ ಹಿರಿಯರ ವಿಭಾಗ:

    15 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು 10 ಪ್ರಥಮ ಹಾಗೂ ನಾಲ್ಕು ದ್ವಿತೀಯ ಬಹುಮಾನ ಗಳಿಸಿದ್ದಾರೆ. ದಿಶಾ ಎ.ಎನ್. (ಇಂಗ್ಲಿಷ್ ಕಂಠಪಾಠ), ನಿಖತ್ ಎನ್.ಎಫ್. (ಅರೇಬಿಕ್ ಧಾರ್ಮಿಕ ಪಠಣ), ಖುಷಿ ಜಿ.ಎಂ. (ದೇಶಭಕ್ತಿ ಗೀತೆ), ಸನ್ನಿಧಿ ಎ.ಎಸ್. (ಪ್ರಬಂಧ ರಚನೆ), ವಿಸ್ಮಿತ (ಕಥೆ ಹೇಳುವುದು), ಶಿವಪ್ರಸಾದ್ (ಚಿತ್ರಕಲೆ), ಗೀತಾ (ಅಭಿನಯ ಗೀತೆ), ಗೋಕುಲ್ (ಕ್ಲೇ ಮಾಡೆಲಿಂಗ್), ಧವನಿ (ಆಶುಭಾಷಣ) ಹಾಗೂ ವಿ. ತಿಲಕ್ (ಮಿಮಿಕ್ರಿ) ಪ್ರಥಮ ಬಹುಮಾನ ಪಡೆದಿದ್ದಾರೆ.

    ಸೈಯದ್ ಉಜ್ಮ ಇಶ್ರತ್ ಉನ್ನಿಸಾ (ಹಿಂದಿ ಕಂಠಪಾಠ), ಚಿರಂಜೀವಿ ಬಿ.ಪಿ. (ಸಂಸ್ಕೃತ ಧಾರ್ಮಿಕ ಪಠಣ), ನಯನ (ಭಕ್ತಿ ಗೀತೆ) ಹಾಗೂ ದಿಶಾ ಎ.ಎನ್. (ಕವನ ವಾಚನ) ದ್ವಿತೀಯ ಬಹುಮಾನ ಗಳಿಸಿದ್ದಾರೆ.

    ಈ ಮೂಲಕ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ನ.25ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಬೃಹತ್ ರಕ್ತದಾನ ಶಿಬಿರ |  ತಿಪಟೂರಿನಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜನೆ ; ಪೂರ್ವಭಾವಿ ಸಭೆ

    November 18, 2026

    ಗ್ರಂಥಾಲಯಗಳು ಜ್ಞಾನಾರ್ಜನೆಗೆ ಪೂರಕ: ಕುಮಾರಸ್ವಾಮಿ  | ತಿಪಟೂರು ಗ್ರಂಥಾಲಯ ಸಪ್ತಾಹ ಆಚರಣೆ

    November 17, 2026

    ತಿಪಟೂರು: ಹಾಲ್ಕುರಿಕೆ ರಸ್ತೆ ಭಾಗದಲ್ಲಿ ನ.16ರಿಂದ ಡಿ.5ರವರೆಗೆ ವಿದ್ಯುತ್ ವ್ಯತ್ಯಯ

    November 16, 2026

    Leave A Reply Cancel Reply

    Our Picks

    ಐಐಟಿಎಫ್ 2026ರಲ್ಲಿ EPFO ಲಾಂಜ್ ಮತ್ತು ESIC ಪೆವಿಲಿಯನ್ ಉದ್ಘಾಟಿಸಿದ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ

    November 16, 2026

    ರಾಮಾಯಣದ ಪುಷ್ಪಕ ವಿಮಾನವನ್ನು ನಿರ್ಮಿಸಿದ್ದು ಯಾರು? ರಾವಣನ ಕೈಗೆ ಸಿಕ್ಕಿದ್ದು ಹೇಗೆ? ಪುರಾಣ ಮತ್ತು ವಿಜ್ಞಾನ ಹೇಳುವುದೇನು?

    November 15, 2026

    ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?

    November 13, 2026

    ಯೋಗವು ರೋಗಮುಕ್ತಿ ಮಾತ್ರವಲ್ಲ, ಭೋಗಮುಕ್ತಿಯನ್ನೂ ನೀಡುತ್ತದೆ; ಪ್ರತಿಯೊಬ್ಬರಿಗೂ ಆಯುರ್ವೇದ ತಲುಪಿಸುವುದೇ ಸರ್ಕಾರದ ಗುರಿ: ಪ್ರಧಾನಿ ಮೋದಿ

    November 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ಪ್ರತಿಭಾ ಕಾರಂಜಿಯಲ್ಲಿ ನೊಣವಿನಕೆರೆ ಪಿಎಂಶ್ರೀ ಕೆಪಿಎಸ್ ಮಕ್ಕಳ ಸಾಧನೆ | 27 ಸ್ಪರ್ಧೆಗಳಲ್ಲಿ 21 ಬಹುಮಾನ: ತಾಲ್ಲೂಕು ಮಟ್ಟಕ್ಕೆ ವಿದ್ಯಾರ್ಥಿಗಳ ಆಯ್ಕೆ

    November 19, 2026

    ತಿಪಟೂರು: ತಾಲೂಕಿನ ನೊಣವಿನಕೆರೆಯಲ್ಲಿ ನ.17 ಮತ್ತು 18ರಂದು ನಡೆದ 2026–27ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ನೊಣವಿನಕೆರೆ…

    ರಂಜಾನ್ ಹಾಗೂ ವಿದ್ಯಾರ್ಥಿಗಳ ಪರೀಕ್ಷೆ ಹಿನ್ನೆಲೆಯಲ್ಲಿ ದಿನಾಂಕ ಬದಲಾವಣೆ : ಶಾಸಕ ಸಿ.ಬಿ.ಸುರೇಶ್‌ ಬಾಬು

    November 19, 2026

    ಹೊಳವನಹಳ್ಳಿಯಲ್ಲಿ ನಿವೇಶನ ಹಕ್ಕುಪತ್ರ ವಿತರಣೆ ಸಭೆ ದಿಢೀರ್ ರದ್ದು! | ಕೊನೆ ಕ್ಷಣದಲ್ಲಿ ಸಭೆ ಮುಂದೂಡಿಕೆ; ನೂರಾರು ಫಲಾನುಭವಿಗಳಿಗೆ ನಿರಾಸೆ

    November 19, 2026

    ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಪವನ್ ಕುಮಾರ್ ರೆಡ್ಡಿ

    November 18, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.