ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಇಂದು ಶಿಫ್ಟ್ ಮಾಡಲಾಗಿದೆ.
ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿರುವ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಕೋರ್ಟ್ ಆದೇಶದಂತೆ ಅವರನ್ನು ಬಳ್ಳಾರಿ ಜೈಲ್ ಗೆ ಶಿಫ್ಟ್ ಮಾಡಲಾಗಿದೆ.
ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ನಟ ದರ್ಶನ್ ಜೈಲು ತಲುಪಿದ್ದು, ಸಾಮಾನ್ಯ ಕೈದಿಯಂತೆ ಜೈಲು ಪ್ರವೇಶಿಸಿದ್ದಾರೆ.
ಕಪ್ಪು ಟೀ ಶರ್ಟ್ ತೊಟ್ಟು, ಎಡಗೈಗೆ ಕ್ರೇಪ್ ಬ್ಯಾಂಡ್ ಧರಿಸಿ ಬೆಡ್ ಶೀಟ್ , ಬಲಗೈಯಲ್ಲಿ ನೀರಿನ ಬಾಟಲ್ ಹಿಡಿದುಕೊಂಡು ದರ್ಶನ್ ಜೈಲಿನೊಳಗೆ ಪ್ರವೇಶಿಸಿದ್ದಾರೆ. ಬಳ್ಳಾರಿ ಕಾರಾಗೃಹದ ಸೆಲ್ ನಂಬರ್ 15ರಲ್ಲಿ ಅವರನ್ನು ಇಡಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


