ಬೆಂಗಳೂರು: ಮೆಜೆಸ್ಟಿಕ್ ನಲ್ಲಿರುವ ಅಣ್ಣಮ್ಮ ದೇಗುಲಕ್ಕೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿ ಶ್ರೀದೇವಿಗೆ ಹರಕೆ ಸಲ್ಲಿಸಿದ್ದಾರೆ.
ವರದಿಗಳ ಪ್ರಕಾರ, ದರ್ಶನ್ ಜೈಲಿನಲ್ಲಿದ್ದಾಗ ವಿಜಯಲಕ್ಷ್ಮಿ ಹರಕೆ ಕಟ್ಟಿಕೊಂಡಿದ್ದರು ಎಂದು ಹೇಳಲಾಗಿದೆ. ಅದರಂತೆ ಇದೀಗ ಅಣ್ಣಮ್ಮ ದೇವಿಗೆ ದರ್ಶನ್ ಪತ್ನಿ ಹರಕೆ ಸಲ್ಲಿಸಿದ್ದಾರೆ. ಅಣ್ಣಮ್ಮ ದೇವಿಗೆ ಸೀರೆ ಜೊತೆ ಮಡಿಲಕ್ಕಿ ತುಂಬಿ ಹರಕೆ ತೀರಿಸಿದ್ದಾರೆ.
ರಾಜಸ್ಥಾನದಲ್ಲಿ ನಡೆದ ‘ಡೆವಿಲ್’ ಶೂಟಿಂಗ್ ನಲ್ಲಿ ಕೂಡ ದರ್ಶನ್ ಜೊತೆ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಕೂಡ ಭಾಗಿಯಾಗಿದ್ದರು. ಕಳೆದ ವಾರ ಏ.4ರಂದು ಬೆಂಗಳೂರಿಗೆ ಚಿತ್ರೀಕರಣ ಮುಗಿಸಿ ವಾಪಸ್ ಬಂದಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————