ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿ 7 ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇದರ ಬೆನ್ನಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿತ್ತು.
ನಟ ದರ್ಶನ್ ಬಂಧನದ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮೀ ಭಾವನಾತ್ಮಕವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ಇನ್’ಸ್ಟಾಗ್ರಾಮ್’ನಲ್ಲಿ ದರ್ಶನ್ ನಿಂತಿರುವ ಹಿಮ್ಮುಖದ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ ದರ್ಶನ್, ಬ್ರೋಕನ್ ಹಾರ್ಟ್ (ಒಡೆದ ಹೃದಯ) ಎಮೋಜಿಯನ್ನು ಕ್ಯಾಪ್ಷನ್ ನಲ್ಲಿ ಹಾಕಿದ್ದಾರೆ.
ಅಭಿಮಾನಿಯೋರ್ವರು ಪ್ರತಿಕ್ರಿಯಿಸಿ, ‘ಯಾವಾಗಲೂ ನಿಮ್ಮೊಂದಿಗಿದ್ದೇವೆ ಬಾಸ್’ ಎಂದು ತಿಳಿಸಿದ್ದಾರೆ. ಪ್ಲೀಸ್ ಸ್ಟೇ ಸ್ರಾಂಗ್ ಎಂದು ಮತ್ತೋರ್ವರು ತಿಳಿಸಿದ್ದಾರೆ. ಮಿಸ್ ಯು ಬಾಸ್, ಸ್ಟೇ ಸ್ಟ್ರಾಂಗ್ ಅತ್ತಿಗೆ ಎಂಬ ಕಾಮೆಂಟ್ ಹೆಚ್ಚಾಗಿ ಹರಿದು ಬಂದಿದೆ.
ದರ್ಶನ್ ಈ ಪ್ರಕರಣದಿಂದ ಮುಕ್ತರಾಗಬೇಕೆಂದು ಬಯಸಿರೋ ಅಭಿಮಾನಿಯೊಬ್ಬರು , ‘ನಾವು ಎಂದೆಂದಿಗೂ ನಿಮ್ಮೊಂದಿಗೆ ಇದ್ದೇವೆ ಬಾಸ್. ನಿಮಗೆ ಹೆಚ್ಚಿನ ಶಕ್ತಿ ಸಿಗಲಿ ಮೇಡಂ. ದಯವಿಟ್ಟು ಬಾಸ್ ಅನ್ನು ಬೇಗ ಹೊರಗೆ ಕರೆದುಕೊಂಡು ಬನ್ನಿ’ ಎಂದು ತಿಳಿಸಿದ್ದಾರೆ. ಮತ್ತೊಂದು ಪ್ರತಿಕ್ರಿಯೆಯಲ್ಲಿ, ‘ಅತ್ತಿಗೆ, ಬಾಸ್ ಬರ್ತಾರೆ, ನಿಮ್ಮ ಜೊತೆ ನಾವಿದ್ದೇವೆ’ ಎಂದು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC