ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಿರ್ಮಾಪಕ ಶಿವರಾಂ ಅವರ ಅಂತ್ಯಕ್ರಿಯೆ ಇಂದು ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ನಡೆಯಿತು. ಶಿವರಾಂ ಮಕ್ಕಳಾದ ರವಿಶಂಕರ್, ಲಕ್ಷ್ಮೀಶ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಶಿವರಾಮ್ ಅವರು ಅಯ್ಯಪ್ಪ ಸ್ವಾಮಿ ಭಕ್ತರಾಗಿದ್ದರು. ಪೂಜೆಯ ವೇಳೆ ಅವರು ಯಾವಾಗಲೂ ಬಾಗಿಲು ಹಾಕಿಕೊಳ್ಳುತ್ತಿದ್ದರು. ಈ ಘಟನೆ ನಡೆದ ದಿನವೂ ಅದೇ ರೀತಿ ಬಾಗಿಲು ಹಾಕಿಕೊಂಡು ಪೂಜೆ ಮಾಡುತ್ತಿದ್ದರು. ಈ ವೇಳೆ ಅವರು ಕುಸಿದು ಬಿದ್ದು, ಅವರ ತಲೆಗೆ ಗಂಭೀರವಾಗಿ ಏಟು ತಗಲಿತ್ತು.
ಇನ್ನೂ ಪೂಜಾ ಕೊಠಡಿಗೆ ಬಾಗಿಲು ಹಾಕಿಕೊಂಡಿದ್ದರಿಂದಾಗಿ ಶಿವರಾಮ್ ಅವರು ಕುಸಿದು ಬಿದ್ದಿದ್ದರು ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ. ವರದಿಗಳ ಪ್ರಕಾರ, ಒಂದು ಗಂಟೆಗೂ ಹೆಚ್ಚು ಕಾಲ ಅವರಿಗೆ ರಕ್ತಸ್ರಾವವಾಗಿತ್ತು ಎಂದು ಹೇಳಲಾಗಿದೆ. ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700