‘ಗೌರಿ’ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅವರು ಸುದೀಪ್ ಅವರನ್ನು ಸಂದರ್ಶನ ಮಾಡಿದ್ದಾರೆ. ಇದರಲ್ಲಿ ಹಲವು ರೀತಿಯ ಪ್ರಶ್ನೆಗಳನ್ನು ಅವರು ಸುದೀಪ್ಗೆ ಕೇಳಿದ್ದಾರೆ.
‘ನನ್ನ ನೆಚ್ಚಿನ ಕಲಾವಿದರು ನೀವು, ನಿಮ್ಮ ನೆಚ್ಚಿನ ಕಲಾವಿದರು ಯಾರು?’ ಎಂದು ಕೇಳಿದರು ಸಮರ್ಜಿತ್ ಲಂಕೇಶ್. ಇದಕ್ಕೆ ಸುದೀಪ್ ಅವರು ಉತ್ತರ ನೀಡಿದ್ದಾರೆ. ‘ನನ್ನ ಫೇವರಿಟ್ ಹೀರೋ ವಿಷ್ಣು ಸರ್. ಇದನ್ನು ಸಾಕಷ್ಟು ಬಾರಿ ಹೇಳಿದ್ದೇನೆ. ಜೀವನದಲ್ಲಿ ನಾನು ಇಬ್ಬರಿಗೆ ಮಾತ್ರ ಬಾಸ್ ಎಂದು ಕರೆದಿದ್ದು. ನಮ್ಮ ತಂದೆಗೆ, ಅದನ್ನು ಇವತ್ತಿಗೂ ಕರೆಯುತ್ತೇನೆ. ಹಾಗೂ ವಿಷ್ಣು ಸರ್ ಗೆ. ವಿಷ್ಣು ಅವರ ಪರ್ಸನಾಲಿಟಿ ಸಖತ್ ಇಷ್ಟ. ಅವರ ಗತ್ತು, ಇರೋ ರೀತಿ ಸಖತ್ ಇಷ್ಟ. ಅವರು ಯಾವಾಗಲೂ ನನ್ನ ಫೇವರಿಟ್’ ಎಂದಿದ್ದಾರೆ ಸುದೀಪ್.
ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಶೀಘ್ರವೇ ಈ ಸಿನಿಮಾದ ರಿಲೀಸ್ ಡೇಟ್ ಬಗ್ಗೆ ಮಾಹಿತಿ ನೀಡುವುದಾಗಿ ನಿರ್ಮಾಣ ಸಂಸ್ಥೆಯಿಂದ ಅಪ್ಡೇಟ್ ಸಿಕ್ಕಿದೆ. ಈ ಚಿತ್ರದಲ್ಲಿ ಸುದೀಪ್ ಅವರು ಪೊಲೀಸ್ ಪಾತ್ರ ಮಾಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


