ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಚಲನಚಿತ್ರ ಶೂಟಿಂಗ್ ನಿಮಿತ್ತ ಬಿಆರ್ ಟಿಗೆ ಬಂದಿದ್ದ ನಟ ಹಾಗು ಸಹಕಲಾವಿದರು, ಬಿಆರ್ ಟಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
10 ನಿಮಿಷ ದೇವಾಲಯದಲ್ಲಿ ಪೂಜೆ ಮಾಡಿ, ಪುತ್ರ ಶೌರ್ಯನ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ದಾಸೋಹ ಭವನದಲ್ಲಿ ವಿಜಯ ರಾಘವೇಂದ್ರ ಪ್ರಸಾದ ಸೇವಿಸಿದ ಬಳಿಕ, ಮೆಚ್ಚಿನ ನಟನ ಜೊತೆ ಅಭಿಮಾನಿಗಳು ಫೋಟೊ ಕ್ಲಿಕ್ಕಿಸಿಕೊಂಡರು.


