ಕನ್ನಡತಿ ಸೀರಿಯಲ್ ಖ್ಯಾತಿಯ ರಂಜನಿ ರಾಘವನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜೀವನ ಸಂಗಾತಿಯನ್ನು ನಟಿ ಪರಿಚಯಿಸಿದ್ದಾರೆ. ಜೀವನ ಸಂಗಾತಿ, ನನ್ನ ಹುಡುಗ ಎಂದು ಹ್ಯಾಶ್ ಟ್ಯಾಗ್ ಕೊಟ್ಟು ಫೋಟೋ ಶೇರ್ ಮಾಡಿ ನಟಿ ಸಂಭ್ರಮಿಸಿದ್ದಾರೆ.
ಸಾಗರ್ ಭಾರಧ್ವಜ್ ಎಂಬುವವರ ಜೊತೆ ರಂಜನಿ ರಾಘವನ್ ಎಂಗೇಜ್ ಆಗಿದ್ದಾರೆ. ಅಂತೂ ಇಂತೂ ನಟಿ ಬಾಯ್ ಫ್ರೆಂಡ್ ಪರಿಚಯ ಮಾಡಿಕೊಟ್ಟಿದಕ್ಕೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇಬ್ಬರಿಗೂ ಶುಭಕೋರುತ್ತಿದ್ದಾರೆ. ಮದುವೆ ಯಾವಾಗ? ಎಂಬ ವಿವರ ಇನ್ನಷ್ಟೇ ರಿವೀಲ್ ಆಗಬೇಕಿದೆ.
ರಂಜನಿ ಅವರ ಕೈ ಹಿಡಿಯುತ್ತಿರೋ ಹುಡುಗನ ಹೆಸರು ಸಾಗರ್ ಭಾರಧ್ವಜ್. ಜೀವನ ಸಂಗಾತಿ, ನನ್ನ್ ಹುಡುಗ , ಬೆಸ್ಟ್ ಫ್ರೆಂಡ್ ಫಾರ್‌ಎವರ್ ಅಂತ #ಟಾಗ್ ಕೊಟ್ಟಿದ್ದಾರೆ. ಅವರು ವೃತ್ತಿಯಲ್ಲಿ ಅಥ್ಲೆಟ್ ಎನ್ನಲಾಗಿದೆ. ರನ್ನರ್, ಸೈಕಲಿಸ್ಟ್, ಬೈಕರ್. ಅವರು ಇನ್ಸ್ಟಾಗ್ರಾಮ್ ಖಾತೆಯನ್ನು ಪ್ರೈವೇಟ್ ಆಗಿ ಇಟ್ಟಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q