ಫ್ರಾನ್ಸ್ ನಲ್ಲಿ ನಡೆಯುತ್ತಿರುವ 2024ರ 77ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಹೆಜ್ಜೆ ಹಾಕುವ ಮೂಲಕ ನಟಿ ಶೋಭಿತಾ ಧೂಳಿಪಾಲ ಗಮನ ಸೆಳೆದಿದ್ದಾರೆ. ನೇರಳೆ ಬಣ್ಣದ ಕಾರ್ಡೆಲಿಯಾ ಜಂಪ್‌ಸೂಟ್ ದಿರಿಸಿನಲ್ಲಿ ನಟಿ ಬೆಕ್ಕಿನ ನಡಿಗೆಯಲ್ಲಿ ಮಿಂಚಿದ್ದಾರೆ. ಕೇನ್ಸ್ ಗೆ ಹೊರಡುವ ಮೊದಲು ಶೋಭಿತಾ ಧೂಳಿಪಾಲ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಫೋಟೋಸ್ ಗೆ ಮನೋಹರವಾದ ಪೋಸ್ ನೀಡಿದರು.
ಅಲ್ಲಿಂದ 77ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ತಮ್ಮ ಬಹು ನಿರೀಕ್ಷಿತ ಚೊಚ್ಚಲ ಪ್ರವೇಶ ಪಡೆದರು. ನೇರಳೆ ಬಣ್ಣದ ಸುಂದರ ದಿರಿಸಿನಲ್ಲಿ ತಮ್ಮ ಸೌಂದರ್ಯ ಪ್ರದರ್ಶಿಸಿದರು. ಶೋಭಿತಾ ಧೂಳಿಪಾಲ ಧರಿಸಿದ್ದ ಆಕರ್ಷಕವಾದ ಜಂಪ್ ಸೂಟ್ ಅನ್ನು ವಿನ್ಯಾಸಕಿ ನಮ್ರತಾ ಜೋಶಿಪುರ ವಿನ್ಯಾಸ ಮಾಡಿದ್ದಾರೆ. ಇಂತಹದ್ದೇ ದಿರಿಸನ್ನು ಕಳೆದ ವರ್ಷದ ಲ್ಯಾಕ್ಮೆ ಫ್ಯಾಶನ್ ವೀಕ್ ನಲ್ಲಿ ನಟಿ ಅಥಿಯಾ ಶೆಟ್ಟಿ ಪ್ರದರ್ಶಿಸಿದ್ದರು.
ಈ ಉಡುಪಿನ ಬೆಲೆ 1.8 ಲಕ್ಷ ರೂಪಾಯಿ ಆಗಿದೆ. ಕ್ಯಾನೆಸ್ ಫಿಲ್ಮ್ ಫೆಸ್ಟ್ ನಲ್ಲಿ ಶೋಭಿತಾ ಮ್ಯಾಗ್ನಮ್ ಇಂಡಿಯಾ ಐಸ್ ಕ್ರೀಮ್ ಬ್ರ್ಯಾಂಡ್ ಅನ್ನು ಪ್ರತಿನಿಧಿಸಿದರು. ಈ ವರ್ಷ ಕೇನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನಟಿಯರಾದ ಐಶ್ವರ್ಯಾ ರೈ ಮತ್ತು ಅದಿತಿ ರಾವ್ ಹೈದರಿ, ಶೋಭಿತಾ ಧೂಳಿಪಾಲ, ಕಿಯಾರಾ ಅಡ್ವಾಣಿ, ಜಾಕ್ವೆಲಿನ್ ಫರ್ನಾಂಡಿಸ್ ಸಾಕಷ್ಟು ಭಾರತೀಯ ತಾರೆಯನ್ನು ಬೆಕ್ಕಿನ ನಡಿಗೆಯಲ್ಲಿ ಹೆಜ್ಜೆ ಹಾಕಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296