ಗುಬ್ಬಿ: ತಾಲ್ಲೂಕಿನ ಚೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆ ಮಾಡಲು ಮುಂದಾದ ಘಟನೆ ನಡೆದಿದೆ. ದಿನಾಂಕ 30 /10/2021 ರ ಶನಿವಾರ ದಂದು ಗ್ರಾಮ ಪಂಚಾಯಿತಿ ಸರ್ವ ಸದಸ್ಯರ ಸಭೆಯನ್ನು ಕರೆಯಲಾಗಿತ್ತು ಈ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಗ್ರಾಮ ಪಂಚಾಯ್ತಿ ಬಂದ ಅನುದಾನವನ್ನು ಯಾವ ಯಾವ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗಿದೆ ಎಂಬ ಮಾಹಿತಿಯನ್ನು ಕೇಳಿದರೆ, ಇದಕ್ಕೆ ಸಮಂಜಸವಲ್ಲದ ಉತ್ತರ ನೀಡಿದ ಗ್ರಾ.ಪಂ. ಅಧ್ಯಕ್ಷರ ನಡೆಗೆ ಸಭೆಯಲ್ಲಿದ್ದ ಸದಸ್ಯರೆಲ್ಲರೂ ಕೆಂಡಾಮಂಡಲವಾಗುವಂತ ನಿದರ್ಶನ ಸಭೆಯಲ್ಲಿ ನಡೆಯಿತು .
ಚೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2ನೇ ಬ್ಲಾಕ್ ನಿಂದ ಚುನಾಯಿತ ಮಹಿಳಾ ಸದಸ್ಯರಾದ ಪದ್ಮರವರು ಪಂಚಾಯಿತಿ ಅಭಿವೃದ್ಧಿಗೆಂದು 6 ಲಕ್ಷದ 80 ಸಾವಿರ ಹಣವನ್ನು ಬಳಕೆ ಮಾಡಿರುವುದರ ಬಗ್ಗೆ ರಸಿದಿ ಸಮೇತವಾಗಿ ಖರ್ಚು ವೆಚ್ಚದ ಮಾಹಿತಿಯನ್ನು ಕೇಳಿದಾಗ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯ ನಿರ್ವಹಿಸುವ ಸಲಕರಣೆಗಳನ್ನು ನೀಡುವ ಖಾಸಗಿ ಹಾರ್ಡ್ವೇರ್ ಅಂಗಡಿ ಮಾಲಿಕನನ್ನು ಕರೆಸಿ ವಿಚಾರಿಸಿದಾಗ ನಾನು ನಮ್ಮ ಅಂಗಡಿಯಲ್ಲಿ ಖರೀದಿ ಮಾಡಿರುವ ವಸ್ತುಗಳ ಸಂಪೂರ್ಣ ರಸೀದಿ ನೀಡಿರುವುದಾಗಿ ತಿಳಿಸಿದರು. ತದನಂತರ ನಮ್ಮ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯವರು ಇನ್ನು ಎರಡು ಮೂರು ದಿನಗಳಲ್ಲಿ ಸಂಪೂರ್ಣ ಖರ್ಚು ವೆಚ್ಚದ ಮಾಹಿತಿಯನ್ನು ಎಲ್ಲಾ ಸದಸ್ಯರಿಗೂ ನೀಡಲಾಗುವುದು ಎಂದು ತಿಳಿಸಿದರು.
ಇದಾದ ಬಳಿಕ ಗ್ರಾಮ ಪಂಚಾಯ್ತಿಗೆ 60 ಲಕ್ಷ ರೂಪಾಯಿ ಅನುದಾನ ಬಂದಿದೆ ಅದನ್ನು ಬಳಕೆ ಮಾಡಿದ ಖರ್ಚು ವೆಚ್ಚದ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಕೇಳಿದಾಗ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಕೂಡಲೇ ಎದ್ದು ನಿಂತು ಉದ್ಧಟತನದ ಮಾತುಗಳನ್ನು ಆಡುವ ಮೂಲಕ ನಾನು ಯಾವುದನ್ನು ಹೊಡ್ಕೊಂಡು ತಿಂದಿಲ್ಲ. ಅದರಲ್ಲಿ ಬರುವ ಕಮಿಷನ್ ಮಾತ್ತ ತಿಂದಿದ್ದೇನೆ ಎಂಬ ಬೇಜವಾಬ್ದಾರಿ ಮಾತುಗಳನ್ನು ಹಾಡಿದಾಗ ಮತ್ತೋರ್ವ ಸದಸ್ಯರಾದ ಕುಮಾರ್ ರವರು ಅಧ್ಯಕ್ಷರೆ ನೀವೊಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ನಿಮ್ಮನ್ನು ಎಲ್ಲಾ ಸದಸ್ಯರು ಗ್ರಾಮ ಪಂಚಾಯ್ತಿಯ ಅನುದಾನದ ಸಮರ್ಪಕ ಮಾಹಿತಿ ಕೇಳುವುದು ನಮ್ಮೆಲ್ಲರ ಹಕ್ಕು. ಅದಕ್ಕೆ ನೀವು ಸಮರ್ಪಕವಾದ ಉತ್ತರ ನೀಡುವುದು ನಿಮ್ಮ ಕರ್ತವ್ಯ ಎಂದರು. ಅದಕ್ಕೂ ಮಿಗಿಲಾಗಿ ಗ್ರಾಮ ಪಂಚಾಯ್ತಿ ನಮ್ಮೆಲ್ಲರ ಮನೆಯಿದ್ದಂತೆ. ಆ ಮನೆಯಲ್ಲಿ ನೀವೊಬ್ಬ ಮೇಟಿ ಇದ್ದಂತೆ ನಮ್ಮ ಗ್ರಾಮ ಪಂಚಾಯ್ತಿ ಸದಸ್ಯರು ಎಲ್ಲರೂ ಸೇರಿ ನಿಮಗೆ ಅಧಿಕಾರ ವಹಿಸಿಕೊಟ್ಟಿದ್ದಾರೆಂದು ಹೇಳಿದಾಗ ನಾನೂಬ್ಬ ಮಹಿಳಾ ಸದಸ್ಯೆ ಎಂಬುದನ್ನು ಮರೆತು ಬೇಜವಾಬ್ದಾರಿತನದ ಮಾತುಗಳನ್ನು ಆಡುವುದಲ್ಲದೆ ಗ್ರಾಮ ಪಂಚಾಯ್ತಿ ನಡವಳಿಕೆ ಪುಸ್ತಕವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗು ಕಾರ್ಯದರ್ಶಿಯವರಿಗೂ ತಿಳಿಸದೆ ತೆಗೆದುಕೊಂಡು ಅತನೆ ಸ್ವಯಂ ಪ್ರೇರಿತವಾಗಿ ಇಂದಿನ ಗ್ರಾಮ ಪಂಚಾಯ್ತಿ ಸಭೆಯಲ್ಲಿ ಸದಸ್ಯರ ಹಾಜರಾತಿ ಕೊರತೆಯಿಂದ ಈ ಸಭೆಯನ್ನು ಮುಂದುಡಲಾಗಿದೆ ಎಂದು ಸಹಿ ಹಾಕುವ ಮೂಲಕ ಪಂಚಾಯಿತಿ ಸಭೆಯಿಂದ ಹೊರಟು ಹೋದ ಪ್ರಸಂಗ ಇವರದಾಯಿತು ಎಂದು ಗ್ರಾಮ ಪಂಚಾಯ್ತಿ ಸದಸ್ಯರಾದ ಪದ್ಮ ಬೇಸರ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ನಮಗೆ ಮತ ನಿಡಿದ ಜನರಿಗೆ ನಾವುಗಳು ಕೊಟ್ಟ ಆಶ್ವಾಸನೆಯನ್ನು ಈಡೇರಿಸುವ ಕೆಲಸವಾಗುತ್ತಿಲ್ಲ ನಮ್ಮ ಬ್ಲಾಕ್ ಗಳಲ್ಲಿ ಬರಿ ಬೀದಿ ದೀಪ ಹಾಕುವುದನ್ನು ಬಿಟ್ಟರೆ ಮತ್ಯಾವ ಅಭಿವೃದ್ಧಿ ಕೆಲಸವಾಗುತ್ತಿಲ್ಲ ನಮ್ಮ ಪಂಚಾಯಿತಿ ಅಧ್ಯಕ್ಷರ ಸರ್ವಾಧಿಕಾರಿ ದೋರಣೆಯಿಂದ ಎಲ್ಲಾ ಸದಸ್ಯರು ಬೇಸತ್ತಿದ್ದು, ನಾವೆಲ್ಲರೂ ಒಂದಾಗಿ ತುಮಕೂರು ಉಪವಿಭಾಗಾಧಿಕಾರಿಗಳು ಜೀಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅವಿಶ್ವಾಸ ನಿರ್ಣಯ ಮಂಡನೆಗೆ ಮನವಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ವರದಿ: ಯೋಗೀಶ್ ಮೇಳೇಕಲ್ಲಹಳ್ಳಿ