ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದ ಆರೋಪದಡಿ ದಾಖಲಿಸಿದ್ದ ಪ್ರಕರಣವೊಂದನ್ನು ಮುಕ್ತಾಯಗೊಳಿಸಲು 7 1.5 ಲಕ್ಷ ಲಂಚ ಪಡೆದ ಬೆಸ್ಕಾಂ ಇಂದಿರಾನಗರ ಉಪ ವಿಭಾಗದ ವಿಚಕ್ಷಣ ದಳದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಯೋಗೇಶ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಅನಧಿಕೃತ ವಿದ್ಯುತ್ ಸಂಪರ್ಕ ಪಡೆದಿದ್ದ ವೆಂಕಟೇಶ್ ವಿರುದ್ಧ ಬೆಸ್ಕಾಂ ವಿಚಕ್ಷಣ ದಳ ಪ್ರಕರಣ ದಾಖಲಿಸಿತ್ತು. ಅದನ್ನು ಮುಕ್ತಾಯಗೊಳಿಸಲು 71.70 ಲಕ್ಷ ಲಂಚ ನೀಡುವಂತೆ ಎಇಇ ಬೇಡಿಕೆ ಇಟ್ಟಿದ್ದರು.


